ಮಳೆಯ ಹೊಡೆತದ ನಡುವೆಯೂ ಮದುವೆ ದಿಬ್ಬಣವೊಂದು ರಸ್ತೆಯಲ್ಲಿ ಸಾಗುವ ವಿಡಿಯೋವೊಂದು ವೈರಲ್ ಆಗಿದೆ.
ಮಳೆ ಎಂದು ತಮ್ಮ ಸಂಪ್ರದಾಯ ಬಿಡಲೊಲ್ಲದ ಜನ ಬ್ಯಾಂಡ್ಸೆಟ್ ಆರ್ಕೆಸ್ಟ್ರಾ ಜೊತೆಗೆ ದೊಡ್ಡ ಟಾರ್ಪಲಿನ್ ಬಳಸಿ ಮದುವೆ ದಿಬ್ಬಣ ಹೆಜ್ಜೆ ಹಾಕುವುದನ್ನು ಕಾಣಬಹುದು. ಅದರಲ್ಲೂ ಕೆಲವರು ಬೋ ಲೋ ತಾರಾರಾ ಹಾಡಿಗೆ ರಸ್ತೆಯಲ್ಲಿ ನಿಂತ ನೀರಿನಲ್ಲಿ ಹೆಜ್ಜೆ ಬಡಿದು ಕುಣಿಯುವುದೂ ಸಹ ಕಾಣಿಸುತ್ತದೆ.
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಅಲಂಕೃತ ಬಸ್ನೊಂದಿಗೆ ಬ್ಯಾಂಡ್ ಪಾಟಿರ್ಯೊಂದಿಗೆ ಮುನ್ನಡೆಯುತ್ತಿರುವ ವರನ ದಿಬ್ಬಣ ಸಾಗುತ್ತದೆ. “ಇಸ್ಸೆ ಎಪಿಕ್ ಬಾರಾತ್ ಮೈನ್ ನೆ ಆಜ್ ತಕ್ ನಹಿ ದೇಖಿ (ನಾನು ಈ ಹಿಂದೆ ಅಂತಹ ಮಹಾಕಾವ್ಯ ಬರಾತ್ ನೋಡಿರಲಿಲ್ಲ)’ ಎಂದು ದೀಪಾಂಶು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಈ ವಿಡಿಯೋ ನೋಡಿದ ಅನೇಕು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಮೀರಾ ನಾಯರ್ ಅವರ ಪ್ರಸಿದ್ಧ ಚಲನಚಿತ್ರ ಮಾನ್ಸೂನ್ ವೆಡ್ಡಿಂಗ್ ಅನ್ನು ನೆನಪಿಸುತ್ತದೆ ಎಂದು ಒಬ್ಬರು ಹೇಳಿಕೊಂಡಿದ್ದಾರೆ.