ಟೊಕಿಯೋ: ಗುಂಡಿಕ್ಕಿ ಜಪಾನ್ ಮಾಜಿ ಪ್ರಧಾನಿಯನ್ನು ಗುಂಡಿಟ್ಟು ಹತ್ಯೆ ಮಾಡಲು ಯತ್ನಿಸಲಾಗಿದೆ. ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಕೊಲೆ ಮಾಡುವ ಯತ್ನ ನಡೆದಿದೆ.
ಜಪಾನ್ ನಾರಾ ನಗರದಲ್ಲಿ ಸಿಂಜೋ ಅಬೆ ಭಾಷಣ ಮಾಡುವಾಗಲೇ ಅವರಿಗೆ ಗುಂಡಿಕ್ಕಲಾಗಿದ್ದು, ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.
ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಪಶ್ಚಿಮ ಜಪಾನ್ ನಾರಾ ನಗರದಲ್ಲಿ ಭಾಷಣ ಮಾಡುವಾಗ ಗುಂಡೇಟಿನಿಂದ ಕುಸಿದುಬಿದ್ದರು. ಗುಂಡೇಟಿನ ಶಬ್ದ ಕೇಳಿ ಬಂದಿದ್ದು, ಶಿಂಜೋ ಅಬೆ ರಕ್ತಸ್ರಾವದಿಂದ ಗಾಯಗೊಂಡಿದ್ದನ್ನು ವರದಿಗಾರನೊಬ್ಬ ನೋಡಿದ್ದಾರೆ ಜಪಾನ್‌ನ ಎನ್.ಹೆಚ್.ಕೆ. ವರ್ಲ್ಡ್ ನ್ಯೂಸ್ ವರದಿ ಮಾಡಿದೆ.
ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿಂಜೊ ಅಬೆ ಜಪಾನ್ ನಲ್ಲಿ ಅತಿ ಹೆಚ್ಚು ಆಡಳಿತ ನಡೆಸಿದ ಪ್ರಧಾನಿಯಾಗಿದ್ದಾರೆ. 2006 -07, 2012 – 20ರವರೆಗೆ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಎದೆಗೆ ಗುಂಡಿಕ್ಕಿ ಹತ್ಯೆಗೆ ಯತ್ನಿಸಲಾಗಿದೆ.