alex Certify ಸಿಲಿಂಡರ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಇಲ್ಲಿದೆ ʼಗುಡ್‌ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಲಿಂಡರ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಇಲ್ಲಿದೆ ʼಗುಡ್‌ ನ್ಯೂಸ್ʼ

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ತಗ್ಗದ ಕಾರಣ ಕಳೆದ ಕೆಲವು ತಿಂಗಳುಗಳಿಂದ ಎಲ್.​ಪಿ.ಜಿ. ಬೆಲೆ ತೀವ್ರ ಏರಿಕೆ ಕಂಡಿದೆ.

ಜುಲೈ 5ರಂದು ಸರ್ಕಾರಿ ಸ್ವಾಮ್ಯದ ರೀಟೇಲರ್​ಗಳು ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ನ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಿದರು, ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ 1,053 ರೂ.ಗೆ ದರ ಏರಿಕೆಯಾಗಿದೆ. ಮುಂಬೈನಲ್ಲಿ ಸಿಲಿಂಡರ್​ ದರ 1,052.50 ರೂ. ಮತ್ತು ಕೋಲ್ಕತ್ತಾದಲ್ಲಿ 1,079 ರೂ., ಚೆನ್ನೆ ನಿವಾಸಿಗಳು ಒಂದು ಸಿಲಿಂಡರ್​ಗೆ 1,068.50 ರೂ. ನೀಡಬೇಕಾಗುತ್ತದೆ.

ಒಂದು ವರ್ಷದ ಹಿಂದೆ ಜುಲೈ 2021 ರಲ್ಲಿ ದೆಹಲಿಯಲ್ಲಿ ಗೃಹ ಬಳಕೆ ಎಲ್​ಪಿಜಿ ಬೆಲೆ 834.50 ರೂ. ಇತ್ತು ನಂತರ, ಆ ವರ್ಷದ ಆಗಸ್ಟ್​ನಲ್ಲಿ 859.50 ರೂ.ಗೆ ಮತ್ತು ಸೆಪ್ಟೆಂಬರ್​ನಲ್ಲಿ 884.50 ರೂ.ಗೆ ಏರಿಸಲಾಯಿತು.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 100 ಡಾಲರ್​ ದಾಟಿದಾಗ 50 ರೂ. ನಂತರ, ಮೇ ತಿಂಗಳಲ್ಲಿ ಏರುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಡೊಮೆಸ್ಟಿಕ್​ ಎಲ್​.ಪಿ.ಜಿ. ಬೆಲೆಯನ್ನು ಎರಡು ಬಾರಿ ಹೆಚ್ಚಿಸಲಾಯಿತು. ಒಟ್ಟಾರೆ ಜುಲೈ 2021 ರಿಂದ ಜುಲೈ 2022 ರವರೆಗೆ ರೂ 218.50 ರಷ್ಟು ಹೆಚ್ಚಿಸಲಾಗಿದೆ.

BREAKING: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಅಪಘಾತದಲ್ಲಿ 8 ಪ್ರಯಾಣಿಕರಿಗೆ ಗಾಯ

ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬುಧವಾರದಂದು ಶೇಕಡಾ 2 ರಷ್ಟು ಕುಸಿದಿದೆ. ಆರ್ಥಿಕ ಹಿಂಜರಿತದಿಂದ ಬೇಡಿಕೆ ಕುಸಿಯಬಹುದೆಂಬ ಆತಂಕದಲ್ಲಿ ಹೂಡಿಕೆದಾರರು ಹೆಚ್ಚು ಚಿಂತಿತರಾಗಿದ್ದಾರೆ.

ಬ್ರೆಂಟ್​ ಕ್ರೂಡ್​ ಫ್ಯೂಚರ್ಸ್​ ಗುರುವಾರ ಮೂರನೇ ಅವಧಿಗೆ ಕುಸಿತವನ್ನು ವಿಸ್ತರಿಸಿತು, ಬ್ಯಾರೆಲ್​ಗೆ $100 ಕ್ಕಿಂತ ಕಡಿಮೆಯಾಗಿ ಹಂತಹಂತವಾಗಿ 97.74 ಕ್ಕೆ ತಲುಪಿದೆ. ಕಳೆದ ಎರಡು ದಿನಗಳಿಂದ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವುದರಿಂದ, ತೈಲ ಮಾರುಕಟ್ಟೆ ಕಂಪನಿಗಳು ಎಲ್.​ಪಿ.ಜಿ. ಬೆಲೆಯನ್ನು ಕಡಿಮೆ ಮಾಡಲು ಉತ್ತಮ ಅವಕಾಶವಿದೆ.

ಪ್ರಸ್ತುತ ರಷ್ಯಾ- ಉಕ್ರೇನ್​ ಬಿಕ್ಕಟ್ಟು ತೈಲ ಬೆಲೆಗಳನ್ನು ಹೆಚ್ಚಿಸಿದೆ. ಇದರ ಪರಿಣಾಮವಾಗಿ ಭಾರತದಲ್ಲೂ ಎಲ್​.ಪಿ.ಜಿ. ಬೆಲೆ ಏರಿಕೆಯಾಗಿದೆ. ರೂಪಾಯಿ ಮೌಲ್ಯ ಕುಸಿತ ಇದಕ್ಕೆ ಪೂರಕವಾಗಿದೆ. ನಾವು ಶೇ.60ರಷ್ಟು ಎಲ್.​ಪಿ.ಜಿ. ಆಮದು ಮಾಡಿಕೊಳ್ಳುತ್ತೇವೆ. ತೈಲ ಬೆಲೆ ಇಳಿಕೆಯಾದ ತಕ್ಷಣ, ಎಲ್​.ಪಿ.ಜಿ. ಬೆಲೆಗಳು ತಗ್ಗಬಹುದು ಎಂದು ನಿರೀಕ್ಷಿಸುತ್ತೇವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...