alex Certify ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ಮಿಂಚಿನ ಸಂಚಾರದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ಮಿಂಚಿನ ಸಂಚಾರದ ದೃಶ್ಯ

ಮಹಿಳೆಯೊಬ್ಬರು ಫ್ಲೋರಿಡಾದ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಕ್ಯಾಮರಾದಲ್ಲಿ ಅದ್ಭುತವಾದ ಮಿಂಚಿನ ಸಂಚಾರದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಮೈಕೆಲ್​ ಮೇ ವೇಲೆನ್​ ತಮ್ಮ ಪತಿಯ ಟ್ರಕ್​​ನಲ್ಲಿ ಕುಳಿತಿದ್ದರು. ಇವರ ಜೊತೆಯಲ್ಲಿ ಮೂವರು ಮಕ್ಕಳು ಕೂಡ ಇದ್ದರು. ರಜೆಯನ್ನು ಮುಗಿಸಿ ಈ ಕುಟುಂಬವು ಮನೆಯ ಕಡೆಗೆ ಹೊರಟಿತ್ತು.

ನಾವು ಟ್ರಕ್​ನಲ್ಲಿ ಹೊರಟಿದ್ದ ವೇಳೆಯಲ್ಲಿ ಮಿಂಚು ಕಾಣಿಸಿಕೊಂಡಿತು. ಹೀಗಾಗಿ ನಾನು ಮಿಂಚಿನ ಫೋಟೋವನ್ನು ಕ್ಲಿಕ್ಕಿಸಲು ಯತ್ನಿಸುತ್ತಿದೆ. ಆದರೆ ಪ್ರತಿ ಬಾರಿಯೂ ನಾನು ಕ್ಲಿಕ್ಕಿಸುತ್ತಿದ್ದ ಫೋಟೋಗಳು ಸರಿಯಾಗಿ ಬರಲಿಲ್ಲ. ಟ್ರಕ್​ನಲ್ಲೇ ಇದ್ದ ನನ್ನ ಅಳಿಯ ಸ್ಲೋ ಮೋಷನ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡುವಂತೆ ಸಲಹೆ ನೀಡಿದನು. ಅದರಂತೆ ನಾನು ಮಾಡಿದಾಗ ಇಂತಹದ್ದೊಂದು ಅದ್ಭುತ ದೃಶ್ಯ ಸೆರೆಯಾಯ್ತು ಎಂದಿದ್ದಾರೆ.

ನನ್ನ ಪತಿಯ ಟ್ರಕ್​​ಗೆ ಸಿಡಿಲು ಬಡಿದಿದೆ. ಆದರೆ ಟ್ರಕ್​ನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ನಮ್ಮ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಜುಲೈ 1ರಂದು ಸನ್​ಶೈನ್​ ಸ್ಕೈ ವೇ ಬಳಿ ಈ ಅವಘಡ ಸಂಭವಿಸಿದೆ ಎಂದು ಮೈಕಲ್​ ಮೇ ವೇಲೆನ್​​ ಹೇಳಿದ್ದಾರೆ.

ಹಿಲ್ಸ್‌ಬರೋ ಕೌಂಟಿಯ ಡೆಪ್ಯೂಟಿ ಕ್ರಿಸ್ಟನ್ ಮೈಸೆಲಿ ಅವರು ವೇಲೆನ್ ಅವರ ಟ್ರಕ್‌ನ ಪಕ್ಕದಲ್ಲಿ ಚಾಲನೆ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಮಿಸೆಲಿ ಕಾರಿಗೂ ಹಾನಿಯಾಗಿದೆ. ಹಿಲ್ಸ್‌ಬರೋ ಕೌಂಟಿ ಶೆರಿಫ್‌ನ ಅಧಿಕೃತ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...