ರಾಕೇಶ್ ಜುಂಜುನ್ ವಾಲಾ ಬೆಂಬಲಿತ ‘ಆಕಾಶ ಏರ್’ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ(ಡಿಜಿಸಿಎ) ಏರ್ ಆಪರೇಟರ್ ಪ್ರಮಾಣಪತ್ರವನ್ನು(ಎಒಸಿ) ಸ್ವೀಕರಿಸಿದೆ.
ಈ ತಿಂಗಳ ಕೊನೆಯಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ಏರ್ ಲೈನ್ ಕಾರ್ಯಾಚರಣೆಯ ಸಿದ್ಧತೆಗಾಗಿ AOC ಪಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೆಯಲ್ಲಿ ಆಕಾಶ ಏರ್ ಹೇಳಿದೆ.
ಡಿಜಿಸಿಎಯ ಮೇಲ್ವಿಚಾರಣೆಯಲ್ಲಿ ಏರ್ ಲೈನ್ ಹಲವಾರು ವಿಮಾನಗಳನ್ನು ಯಶಸ್ವಿಯಾಗಿ ನಡೆಸುವುದರೊಂದಿಗೆ ಪ್ರಕ್ರಿಯೆಯು ಕೊನೆಗೊಂಡಿದೆ. ಹೂಡಿಕೆದಾರ ರಾಕೇಶ್ ಜುನ್ಜುನ್ ವಾಲಾ ಅವರ ಬೆಂಬಲದೊಂದಿಗೆ ವಿಮಾನಯಾನ ಸಂಸ್ಥೆಯು ತನ್ನ ಮೊದಲ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಜೂನ್ 21 ರಂದು ಭಾರತದಲ್ಲಿ ನೀಡಿತ್ತು.