ದೇವರನ್ನು ಶೃದ್ಧಾ-ಭಕ್ತಿಯಿಂದ ಪೂಜಿಸಬೇಕು. ಯಾವುದೇ ಅಪೇಕ್ಷೆಗಳಿಲ್ಲದೇ ದೇವರನ್ನು ಪೂಜಿಸಿದರೆ ಅಂತವರಿಗೆ ದೇವರು ಬೇಗ ಒಲಿಯುತ್ತಾನೆ ಎಂದು ಹೇಳುತ್ತಾರೆ. ದೇವರ ಪೂಜೆ ಮಾಡುವವರು ಶುದ್ಧವಾಗಿರಬೇಕು.
ಪ್ರತಿಯೊಬ್ಬರು ದೇವರ ಪೂಜೆ ಮಾಡುವಾಗ ಮೊದಲು ಸ್ನಾನ ಮಾಡುತ್ತಾರೆ. ಆದರೆ ಸ್ನಾನ ಮಾಡದೇ ಎಂದಿಗೂ ದೇವರ ಪೂಜೆ ಮಾಡಬಾರದು. ಇದರಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ.
ಅಲ್ಲದೇ ನಕರಾತ್ಮಕ ಶಕ್ತಿಗಳು ವಾಸವಿರುವ ಸ್ಮಶಾನಕ್ಕೆ ಹೋಗಿ ಬಂದ ಬಳಿಕ ಪೂಜೆ ಮಾಡಬಾರದು. ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ. ಹಾಗೇ ಮಾಂಸಹಾರ ಸೇವಿಸಿ ಮತ್ತು ಮದ್ಯಪಾನ ಮಾಡಿದ ಬಳಿಕ ದೇವರ ಪೂಜೆ ಮಾಡಬಾರದು.
ಇನ್ನು ಜಗಳವಾಡಿದ ಬಳಿಕ ದೇವರ ಪೂಜೆ ಮಾಡಬೇಡಿ. ಕೆಟ್ಟ ಪದಗಳಿಂದ ಬೇರೆಯವರ ಮನಸ್ಸಿಗೆ ನೋವುಂಟು ಮಾಡಿ ದೇವರ ಪೂಜೆ ಮಾಡಿದರೆ ಯಾವ ಫಲವು ದೊರೆಯುವುದಿಲ್ಲ.