ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ವೃದ್ಧ ವ್ಯಕ್ತಿಯೊಬ್ಬರು ತಮ್ಮ ಮೊಬಿಲಿಟಿ ಸ್ಕೂಟರ್ನಲ್ಲಿ ಪ್ರಯಾಣಿಸುವಾಗ ಉಕ್ರೇನಿಯನ್ ರಾಷ್ಟ್ರಗೀತೆಯನ್ನು ಪ್ಲೇ ಮಾಡಿ ಸಾಗುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಟ್ರಿಯಾದ ಉಕ್ರೇನ್ನ ಮಾಜಿ ರಾಯಭಾರಿ ಒಲೆಕ್ಸಾಂಡರ್ ಶೆರ್ಬಾ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್ ಅನ್ನು ರಷ್ಯಾ ಆಕ್ರಮಿತ ಖರ್ಸನ್ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಶೆರ್ಬಾ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.
ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಆ ವೃದ್ಧರು ಮೊಬಿಲಿಟಿ ಸ್ಕೂಟರ್ನಲ್ಲಿ ಸಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲಿದ್ದ ಕೆಲವರು ಇವರನ್ನು ನೋಡಿ ನಗುತ್ತಿರುವಂತೆ ಕಂಡುಬಂದರೆ, ಇತರರು ಅವನನ್ನು ಬಹಳ ಎಚ್ಚರಿಕೆಯಿಂದ ಗಮನಿಸಿದರು. ಹಲವಾರು ಜನರು ಜೊತೆಗೆ ಹಾಡುತ್ತಾರೆ. ವಿಡಿಯೊದ ಕೊನೆಯಲ್ಲಿ ಹಾಡು ಮುಗಿಯುತ್ತಿದ್ದಂತೆ ಜೋರಾಗಿ ಹಷೋರ್ದ್ಗಾರ ಮಾಡುತ್ತಾರೆ ಮತ್ತು ಆ ವ್ಯಕ್ತಿಯನ್ನು ಸ್ವಾಗತಿಸಲು ಮುಂದೆ ಬರುವುದನ್ನು ಸಹ ಕಾಣಬಹುದು.
ಈ ವಿಡಿಯೋ 1,98,000ಕ್ಕೂ ಹೆಚ್ಚು ಬಾರಿ ವೀಕ್ಷ ಣೆಕಂಡಿದೆ. ನೂರಾರು ಕಾಮೆಂಟ್ ಸಹ ಬಂದಿದೆ. ಇದು ನನ್ನನ್ನು ಅಳುವಂತೆ ಮಾಡಿತು….. ನೀನು ಗೆಲ್ಲುವೆ ! ಎಂದು ನೆಟ್ಟಿಗರು ಪ್ರಕ್ರಿಯೆ ನೀಡಿದ್ದಾರೆ. “ಈ ಹಿರಿಯ ವ್ಯಕ್ತಿಗೆ ನನ್ನ ಅತ್ಯಂತ ಗೌರವ ಮತ್ತು ಎಲ್ಲಾ ಕೆಚ್ಚೆದೆಯ ಉಕ್ರೇನಿಯನ್ನರು ಫ್ಯಾಸಿಸ್ಟ್ ರಷ್ಯಾದ ಆಕ್ರಮಣವನ್ನು ವಿರೋಧಿಸುತ್ತಾರೆ” ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.