ಅತಿ ವೇಗವಾಗಿ ಹಾರುವ ʼಪೇಪರ್ ಪ್ಲೇನ್ʼ ಮಾಡಲು ಇಲ್ಲಿದೆ ಟೆಕ್ನಿಕ್ 07-07-2022 2:21PM IST / No Comments / Posted In: Latest News, Live News, International ಚಿಕ್ಕವರಿದ್ದಾಗ ಪೇಪರ್ ಬೋಟ್ ಮಾಡಿ ನೀರಲ್ಲಿ ಬಿಡೋದು ಇಲ್ಲಾ ರಾಕೆಟ್ ಮಾಡಿ ಹಾರಿಸೋದು, ಪ್ಲೇನ್ ಮಾಡೋದು ಕಾಮನ್ ಆಗಿತ್ತು. ಆದರೆ ಇತ್ತೀಚಿನ ಮಕ್ಕಳು ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಇಡೀ ಪ್ರಪಂಚವನ್ನೇ ಮರೆತು ಬಿಟ್ಟಿರ್ತಾರೆ. ಆದರೆ ಈಗ ಅದೇ ಮೊಬೈಲ್ನಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಆ ವಿಡಿಯೋ ಪೇಪರ್ ರಾಕೆಟ್ ಹೇಗೆ ಮಾಡೋದು ಮತ್ತು ಅದನ್ನ ಹೇಗೆ ಹಾರಿಸೋದು ಅನ್ನೋದನ್ನ ತೋರಿಸಲಾಗಿದೆ. ಈ ವಿಡಿಯೋದಲ್ಲಿ ಹಾರಿಸಲಾಗಿರೋ ಈ ಪೇಪರ್ ಪ್ಲೇನ್ ತುಂಬಾ ವೇಗವಾಗಿ ಗಾಳಿಯಲ್ಲಿ ಹಾರುವುದನ್ನ ಕಾಣಬಹುದು. ಇಷ್ಟು ವೇಗವಾಗಿ ಅದ್ಹೇಗೆ ಹಾರುತ್ತೆ ಅಂತ ಅಂದ್ಕೊಡ್ರಾ, ಇಲ್ಲಿ ಬಳಸಲಾಗಿರುವ ಟೆಕ್ನಿಕ್. ಅದನ್ನೂ ಈ ವಿಡಿಯೋದಲ್ಲಿ ಹೇಳಲಾಗಿದೆ. ಈ ಪ್ಲೇನ್ ಹಾರಿಸೋದಕ್ಕಂತಾನೇ ಇನ್ನೊಂದು ಪೇಪರ್ ಸ್ಟಾಂಡ್(ಲಾಂಚ್ಪ್ಯಾಡ್)ಗೆ ರಬ್ಬರ್ಬ್ಯಾಂಡ್ನ್ನ ಬಳಸಲಾಗಿದೆ. ಅದೇ ಈ ಸ್ಪೆಷಲ್ ಟೆಕ್ನಿಕ್. ತನ್ಸೂ ಯೆಗೆನ್ ಈ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ. ಮನೆಯಲ್ಲೇ ಹೇಗೆ ಪೇಪರ್ಪ್ಲೇನ್ ಮಾಡೋದು ಹಾಗೂ ಅದನ್ನ ವೇಗವಾಗಿ ಹಾರಿಸುವ ಟ್ರಿಕ್ ಈ ವಿಡಿಯೋ ನೋಡಿ ಮಕ್ಕಳು ಕಲಿಯಬಹುದಾಗಿದೆ. ಇದೇ ರೀತಿಯ ಪೇಪರ್ ಪ್ಲೇನ್ ವೇಗವಾಗಿ ಹಾರಿಸಿ ಕೊರಿಯನ್ ಜನ ಈಗಾಗಲೇ ತಮ್ಮ ಹೆಸರನ್ನ ಗಿನ್ನೆಸ್ ಬುಕ್ಲ್ಲಿ ದಾಖಲಿಸಿಕೊಂಡಿದ್ದಾರೆ. ಅದು ಸುಮಾರು 252 ಫೀಟ್ ಮೇಲೆ ಹಾರಿಸಲಾಗಿದೆ ಅಂತ ಅಂದಾಜು ಮಾಡಲಾಗಿದೆ. ಈಗಾಗಲೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಿಲಿಯನ್ ಜನ ನೋಡಿದ್ದಾರೆ. ನೀವು ಕೂಡಾ ಸ್ವಲ್ಪ ಟೈಂ ಮಾಡ್ಕೊಂಡು ಯಾಕೆ ಮನೆಯಲ್ಲಿ ಒಮ್ಮೆ ಟ್ರೈ ಮಾಡ್ಬಾರದು. Launchpad for paper plane🛫 pic.twitter.com/IFPLZS1TPn — Tansu Yegen (@TansuYegen) July 4, 2022