ಉತ್ತರ ಪ್ರದೇಶ ವಿಧಾನ ಪರಿಷತ್ ನಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನ ಯಾವುದೇ ಪ್ರತಿನಿಧಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈವರೆಗೆ ಕಾಂಗ್ರೆಸ್ ನ ಏಕೈಕ ವಿಧಾನ ಪರಿಷತ್ ಸದಸ್ಯರಾಗಿದ್ದ ದೀಪಕ್ ಸಿಂಗ್ ಅವರು ಬುಧವಾರದಂದು ನಿವೃತ್ತಿಯಾಗಿದ್ದು, ಹೀಗಾಗಿ 135 ವರ್ಷಗಳಲ್ಲಿ ಕಾಂಗ್ರೆಸ್ ಶೂನ್ಯ ಸ್ಥಿತಿಗೆ ತಲುಪಿದೆ.
1887 ರ ಜನವರಿ 5ರಂದು ಉತ್ತರ ಪ್ರದೇಶ ವಿಧಾನ ಪರಿಷತ್ ರಚನೆಯಾಗಿದ್ದು, ಅಂದಿನಿಂದಲೂ ಕನಿಷ್ಠ ಅಥವಾ ಗರಿಷ್ಠ ಸಂಖ್ಯೆಯಲ್ಲಿ ಕಾಂಗ್ರೆಸ್ ಸದಸ್ಯರು ಇರುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನ ಯಾವುದೇ ಪ್ರತಿನಿಧಿ ವಿಧಾನ ಪರಿಷತ್ ನಲ್ಲಿ ಇಲ್ಲ.