ಶಿವಮೊಗ್ಗ: ಜಿಲ್ಲೆಗಳಲ್ಲಿ ಆಡಳಿತಾತ್ಮಕ ನಿರ್ಧಾರಗಳನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳುತ್ತಾರೆ. ಇಂತಹ ಜಿಲ್ಲಾಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಯುವ ಜನತೆಗೆ ಅವಕಾಶವೊಂದು ಇಲ್ಲಿದೆ. ಜಿಲ್ಲಾ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಈ ಅವಕಾಶವನ್ನು ಒದಗಿಸುತ್ತಿದೆ.
ಹೌದು, ವಿಶ್ವ ಯುವ ಕೌಶಲ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇದನ್ನು ಬರೆಯುವ ಅವಕಾಶವಿದೆ. ಆಸಕ್ತರು ತಾವು ಬರೆದ ಪ್ರಬಂಧವನ್ನು ಸ್ವ ವಿವರದ ಜೊತೆಗೆ https://www.kaushalkar.com/app/skill-essay-competition ಲಿಂಕ್ ಮೂಲಕ ಜುಲೈ 10 ರೊಳಗೆ ಸಲ್ಲಿಸಬೇಕಾಗಿದೆ.
ಪ್ರಬಂಧವು ಒಂದು ಸಾವಿರದಿಂದ ಸಾವಿರದ ಇನ್ನೂರು ಪದಗಳಿಗೆ ಮೀರದಂತಿರಬೇಕಾಗಿದ್ದು ರಾಜ್ಯಮಟ್ಟದ ಪ್ರಥಮ ಬಹುಮಾನವಾಗಿ 15000 ರೂ., ದ್ವಿತೀಯ ಬಹುಮಾನ 10,000 ರೂ. ಹಾಗೂ ತೃತಿಯ 5000 ರೂ. ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕೌಶಲ ಕರ್ನಾಟಕ ವೆಬ್ಸೈಟ್ ನೋಡಬಹುದಾಗಿದೆ.