ಹೆಸರಾಂತ ಫ್ರೆಂಚ್ ನಟಿ ಜುಡಿತ್ ಚೆಮ್ಲಾ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯಾಗಿದ್ದೇನೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಮೇಲಾದ ಗಾಯಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ನಟಿ ಜುಡಿತ್ ಚೆಮ್ಲಾ ಉದ್ದನೆಯ ಟಿಪ್ಪಣಿಯನ್ನೇ ಬರೆದಿದ್ದಾರೆ.
ಒಂದು ವರ್ಷದ ಹಿಂದೆ ನನ್ನ ಮುಖಕ್ಕೆ ಗಾಯವಾಗಿದೆ. ನನ್ನ ಕಣ್ಣಿನ ಕೆಳಗೆ ನೀಲಿ. ನೇರಳೆ ಕಲೆಗಳನ್ನು ಕಾಣಬಹುದು. ನನ್ನ ಮುಖ ವಿಕಾರಗೊಂಡಿದೆ. ಒಂದು ವರ್ಷ ಹಿಂದೆ ನನ್ನ ಮುಖವನ್ನು ನಾನು ಕನ್ನಡಿಯಲ್ಲಿ ನೋಡಿದಾಗ ಎಂದುಕೊಂಡಿದ್ದೆ ಈ ಮುಖವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲವೆಂದು ಎಂದು ಬರೆದಿದ್ದಾರೆ.
ಮುಂದುವರೆದು ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡಿರುವ ಜುಡಿತ್ ಚೆಮ್ಲಾ ಆತ ನನಗೆ ಹಾನಿ ಮಾಡಲು ಯತ್ನಿಸುತ್ತಿದ್ದಾನೆ ಎಂಬುದಕ್ಕೆ ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ. ಆತ ನನ್ನನ್ನು ಒಂಟಿಯಾಗಿ ಬಿಡಬೇಕು ಅಂದರೆ ನಾನೇನು ಮಾಡಬೇಕು..? ನನ್ನಿಂದ ಇನ್ನು ಇದನ್ನು ಸಹಿಸಲು ಸಾಧ್ಯವಿಲ್ಲ. ನನ್ನ ಜೀವನದಲ್ಲಿ ನನಗೆ ಶಾಂತಿ ಬೇಕು. ನಾನು ಮೂರನೇ ಬಾರಿಗೆ ಪೊಲೀಸರ ಬಳಿ ಮರಳಬೇಕೇ..? ಎಂದು ಬರೆದುಕೊಂಡಿದ್ದಾರೆ.