ದಿನ ಸಾಂಬಾರು, ಸಾರು ಮಾಡಿ ಬೇಜಾರು ಎನ್ನುವವರು ಒಮ್ಮೆ ಈ ತಂಬುಳಿ ಮಾಡಿ ನೋಡಿ. ಥಟ್ ಅಂತ ಆಗಿಬಿಡುತ್ತದೆ. ಕೆಲಸವೂ ಕಡಿಮೆ ಜತೆಗೆ ಇದರ ರುಚಿಯೂ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ಸೌತೆಕಾಯಿ – 1, ತೆಂಗಿನಕಾಯಿ ತುರಿ – 2 ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು – 1 ಟೇಬಲ್ ಸ್ಪೂನ್, ಹಸಿಮೆಣಸು – 3, ಉಪ್ಪು – ರುಚಿಗೆ ತಕ್ಕಷ್ಟು, ಮೊಸರು – 1 ಕಪ್.
ಮಾಡುವ ವಿಧಾನ:
ಸೌತೆಕಾಯಿಯ ಸಿಪ್ಪೆ ತೆಗೆದು ಅದರ ಬೀಜ ತೆಗೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಸೌತೆಕಾಯಿ, ತೆಂಗಿನಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ. ಇದನ್ನು ಮೊಸರಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಿಸಿ ಅನ್ನದ ಜತೆ ಇದನ್ನು ಹಾಕಿಕೊಂಡು ಊಟ ಮಾಡುವುದಕ್ಕೆ ಚೆನ್ನಾಗಿರುತ್ತದೆ.