ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಮಹಿಳೆಯೊಬ್ಬಳು ಪತಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾಳೆ. ಆತ ಪತ್ನಿ ವಿನಿಮಯ ಮಾಡಿಕೊಳ್ತಿರೋದಾಗಿ ಆರೋಪಿಸಿದ್ದಾಳೆ. ದೆಹಲಿಯಲ್ಲಿ ನಡೆಯೋ ಇಂತಹ ಪತ್ನಿ ವಿನಿಮಯ ಮಾಡಿಕೊಳ್ಳುವ ಪಾರ್ಟಿಗಳಿಗೆ ಆತ ಪತ್ನಿಯನ್ನು ಬಲವಂತವಾಗಿ ಕರೆದೊಯ್ಯುತ್ತಿದ್ದ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶ ಪೊಲೀಸರು ಆಕೆಯ ಪತಿ ಮತ್ತು ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನ್ನ ಸ್ವಂತ ಸಹೋದರನೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಗಂಡ ಒತ್ತಾಯಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸಂತ್ರಸ್ತೆ ಮುಜಾಫರ್ ನಗರದ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್-I ನ್ಯಾಯಾಲಯದ ಮುಂದೆ ದೂರು ನೀಡಿದ್ದಾಳೆ. ತನ್ನ ಪತಿ ಉದ್ಯಮಿಯೊಂದಿಗೆ ಸೇರಿಕೊಂಡು ತನಗೆ ಬೆದರಿಕೆ ಹಾಕುತ್ತಿದ್ದ, ಮತ್ತು ಪತ್ನಿಯನ್ನು ಪರಸ್ಪರ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಪಾರ್ಟಿಗಳಿಗೆ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
2021ರ ಜೂನ್‌ನಲ್ಲಿ ಇವರ ವಿವಾಹವಾಗಿತ್ತು. ಮದುವೆ ನಂತರ ಅವರು ಗುರುಗ್ರಾಮ್ ನಲ್ಲಿ ನೆಲೆಸಿದ್ದರು. ಇದು ಅವರಿಗೆ ಎರಡನೇ ಮದುವೆ. ಪತ್ನಿ ವಿನಿಮಯದ ಪಾರ್ಟಿಗಳಿಗೆ ಬರಲು ನಿರಾಕರಿಸಿದರೆ ಪತಿ ಆಕೆಗೆ ಹೊಡೆಯುತ್ತಿದ್ದನಂತೆ, ಲೈಂಗಿಕ ಕಿರುಕುಳ ಕೂಡ ಕೊಡುತ್ತಿದ್ದ.
ಏಪ್ರಿಲ್ 24ರಂದು ಮಹಿಳೆ ಗುರುಗ್ರಾಮ್ ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿದ್ದಾಳೆ. ಆದ್ರೆ ಪತಿ ಕಳಿಸಿದ ಗೂಂಡಾಗಳೇ ಆಕೆಯನ್ನು ಮಾರ್ಗಮಧ್ಯೆ ತಡೆದಿದ್ದಾರಂತೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಆಕೆ ಉತ್ತರ ಪ್ರದೇಶಕ್ಕೆ ಬಂದು ಕೋರ್ಟ್ ಮೆಟ್ಟಿಲೇರಿದ್ದಾಳೆ. ಇದೀಗ ಕೋರ್ಟ್ ಆದೇಶದಂತೆ ಕೇಸ್ ದಾಖಲಾಗಿದ್ದು, ಪ್ರಕರಣವನ್ನು ಗುರುಗ್ರಾಮ್‌ಗೆ ವರ್ಗಾಯಿಸಲಾಗುತ್ತದೆ.