alex Certify ಒಂದೇ ಅಪಾರ್ಟ್ಮೆಂಟ್ ನಲ್ಲಿ ಚಂದ್ರಶೇಖರ ಗುರೂಜಿ – ಹತ್ಯೆ ಆರೋಪಿ ಮಹಾಂತೇಶ ವಾಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಅಪಾರ್ಟ್ಮೆಂಟ್ ನಲ್ಲಿ ಚಂದ್ರಶೇಖರ ಗುರೂಜಿ – ಹತ್ಯೆ ಆರೋಪಿ ಮಹಾಂತೇಶ ವಾಸ…!

ಮಂಗಳವಾರದಂದು ಹುಬ್ಬಳ್ಳಿ ಉಣಕಲ್ ರಸ್ತೆಯಲ್ಲಿರುವ ‘ದಿ ಪ್ರೆಸಿಡೆಂಟ್’ ಹೋಟೆಲ್ ನಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು, ಗುರೂಜಿ ಆಪ್ತ ವಲಯದಲ್ಲಿದ್ದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ದಡೆನೂರ ಎಂಬವರನ್ನು ಈಗಾಗಲೇ ಬಂಧಿಸಿದ್ದಾರೆ.

ಇದರ ಮಧ್ಯೆ ಒಂದೊಂದೇ ಸಂಗತಿಗಳು ಬಿಚ್ಚಿಕೊಳ್ಳುತ್ತಿದ್ದು, ಮಹಾಂತೇಶ ಶಿರೂರ, ಚಂದ್ರಶೇಖರ್ ಗುರೂಜಿ ಅವರ ‘ಸರಳ ಜೀವನ’ ಟಿವಿ ಚಾನಲ್ ಹುಬ್ಬಳ್ಳಿ ಕೇಂದ್ರ ಕಚೇರಿಯ ಹೆಡ್ ಆಗಿದ್ದರೆ ಮಂಜುನಾಥ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಕೂಡ ಇಲ್ಲಿಯೇ ಕೆಲಸ ಮಾಡುತ್ತಿದ್ದು ಇವರಿಬ್ಬರ ಮದುವೆಯನ್ನು ಚಂದ್ರಶೇಖರ ಗುರೂಜಿಯವರೇ ಮಾಡಿಸಿದ್ದರೆಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿಯ ಗೋಕುಲ ರಸ್ತೆ ಜಯಸಿ ನಗರದಲ್ಲಿ ಗುರೂಜಿ ಅಪಾರ್ಟ್ಮೆಂಟ್ ನಿರ್ಮಿಸಿದ್ದು, ಗುರೂಜಿ 008 ನಂಬರಿನ ಮನೆಯನ್ನು ತಾವಿರಿಸಿಕೊಂಡಿದ್ದರೆ, ಮಹಾಂತೇಶ ನ ಕುಟುಂಬ 308 ನೇ ನಂಬರ್ ನ ಮನೆಯಲ್ಲಿತ್ತು ಎನ್ನಲಾಗಿದೆ. ಮಹಾಂತೇಶ ಕಚೇರಿಯಲ್ಲಿ ಅವ್ಯವಹಾರ ನಡೆಸಿದ್ದ ಕಾರಣ ಆತನನ್ನು ಚಂದ್ರಶೇಖರ ಗುರೂಜಿ ಕೆಲಸದಿಂದ ತೆಗೆದಿದ್ದರು ಎಂದು ತಿಳಿದುಬಂದಿದೆ.

ಅಲ್ಲದೆ ಮಹಾಂತೇಶನಿದ್ದ ಅಪಾರ್ಟ್ಮೆಂಟ್ ನಲ್ಲಿ ಚಂದ್ರಶೇಖರ ಗುರೂಜಿ ಆತನಿಗೆ ಪಾರ್ಕಿಂಗ್ ಕಲ್ಪಿಸಿ ಕೊಟ್ಟಿರಲಿಲ್ಲದರ ಜೊತೆಗೆ ಸೋಲಾರ್ ವ್ಯವಸ್ಥೆ ಅಳವಡಿಸಿರಲಿಲ್ಲವೆಂದು ಹೇಳಲಾಗಿದೆ. ಹೀಗಾಗಿ ಆತ ಧಾರವಾಡ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...