ಟ್ವಿಟ್ಟರ್ ನಲ್ಲಿ ವೈರಲ್ ಆಗಿವೆ ಬೆಂಗಳೂರಿನ ʼನೋ ಪಾರ್ಕಿಂಗ್ ಫಲಕʼ ಗಳು 06-07-2022 10:14AM IST / No Comments / Posted In: Karnataka, Latest News, Live News ಯಾರಾದರೂ ಅಪರಿಚಿತರು ನಿಮ್ಮ ಮನೆಯ ಗೇಟಿನ ಮುಂದೆ ತಮ್ಮ ವಾಹನವನ್ನು ನಿಲ್ಲಿಸಿದಾಗ ನಿಮಗೆ ಏನನಿಸುತ್ತದೆ..? ಬಹುಶಃ ಕಿರಿಕಿರಿ ಎಂದೆನಿಸಬಹುದು ಅಲ್ವಾ..? ಈ ವಿಚಾರ ಜಗಳಕ್ಕೂ ಕಾರಣವಾಗಬಹುದು. ಆದರೆ, ಬೆಂಗಳೂರಿನ ಕೋರಮಂಗಲದ ಮನೆ ಮಾಲೀಕರು ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದು, ಇದು ನೆಟ್ಟಿಗರಿಗೆ ಉದ್ಧಟತನ ಎಂಬಂತೆ ತೋರಿದೆ. ಆದಿತ್ಯ ಮೊರಾರ್ಕಾ ಎಂಬ ಬಳಕೆದಾರರು ಇದರ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವೈರಲ್ ಪೋಸ್ಟ್ನಲ್ಲಿ, ಆದಿತ್ಯ ಮೊರಾರ್ಕಾ ಅವರು ನೋ ಪಾರ್ಕಿಂಗ್ ಬೋರ್ಡ್ಗಳ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಇಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆ ಯೋಚಿಸಲೇಬೇಡಿ ಎಂದು ಬರೆದಿದ್ದರೆ, ಇನ್ನೊಬ್ಬರು ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ. 5 ನಿಮಿಷ ಅಲ್ಲ, 30 ಸೆಕೆಂಡು ಕೂಡ ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಬೋರ್ಡ್ ಹಾಕಿದ್ದಾರೆ. ಈ ಫೋಟೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಒಬ್ಬರು ತಮ್ಮ ಕಾರನ್ನು ಗೇಟ್ನ ಮುಂದೆ ನಿಲ್ಲಿಸಿದಾಗ ಮತ್ತು ನಿಮ್ಮ ಸ್ವಂತ ಕಾರನ್ನು ನೀವು ಹೊರತೆಗೆಯಲು ಸಾಧ್ಯವಾಗದಿದ್ದಾಗ ಇದು ಉಪದ್ರವವಾಗುತ್ತದೆ ಎಂದು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ಯಾರಾದರೂ ಪಾರ್ಕಿಂಗ್ ಮಾಡುವುದರಿಂದ ಜನರಿಗೆ ಏನು ಸಮಸ್ಯೆ ಆಗುತ್ತದೆ..? ವಿಶೇಷವಾಗಿ ಯಾರಾದರೂ ರಸ್ತೆಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದರೆ ಏನಾಗುತ್ತದೆ? ರಸ್ತೆಯೇನು ಅವರ ಖಾಸಗಿ ಆಸ್ತಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. Just put a parking charge of 500/-. Problem solved. — Shubham Patel 💻 🇮🇳 (@CodeKrafter) July 3, 2022 Better way to avoid is by charging for parking 😁 — Sarthak🤺 (@Sarthxk7) July 3, 2022 Lol this is peaks! — Nikhilesh Adiyala (@AdiNikhilesh) July 3, 2022 https://twitter.com/SankalpKotewar/status/1543613521925091328?ref_src=twsrc%5Etfw%7Ctwcamp%5Etweetembed%7Ctwterm%5E1543613521925091328%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthese-no-parking-signs-from-bengaluru-are-viral-the-internet-has-a-lot-to-say-about-them-1970532-2022-07-05 It’s the worst kind of nuisance when one parks car right in front of the gate and you can’t take your own car out! — Ayushi Khandelwal, MD (@Derma_Queen17) July 3, 2022 You haven't been to Pune it seems 😅 — Avdhoot (@Avdhoot_7) July 3, 2022 Koramangala house owners got no chill for vehicle owners 🤷 pic.twitter.com/5BOUK1qdxh — Aditya Morarka (@AdityaMorarka) July 3, 2022