ವಯಸ್ಸು13, ಬರೆದಿದ್ದು 3 ಉಪನ್ಯಾಸ ಪುಸ್ತಕ….! 06-07-2022 6:50AM IST / No Comments / Posted In: Featured News, Live News, International ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಮಾತಿದೆ. ಅದು ರಿತಜ್ ಹುಸೈನ್ ಅಲ್ಹಜ್ಮಿ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಆಕೆಯ ವಯಸ್ಸು ಜಸ್ಟ್ 13 ಅಷ್ಟೆ. ಆದರೆ ಆಕೆ ಮಾಡಿರುವ ಸಾಧನೆ ಇದೆಯಲ್ಲ, ಘಟಾನುಘಟಿಗಳನ್ನ ದಂಗಾಗುವ ಹಾಗೆ ಮಾಡಿದೆ. ಅಷ್ಟಕ್ಕೂ ಆಕೆ ಮಾಡಿದ್ದು ಏನು ಅಂತಿರಾ? ಆಕೆ ಇಷ್ಟು ಚಿಕ್ಕ ವಯಸ್ಸಿಗೆನೇ ಒಂದಲ್ಲ, ಎರಡಲ್ಲ, ಮೂರು ಪುಸ್ತಕಗಳನ್ನ ಬರೆದಿದ್ದಾಳೆ. 13 ವಯಸ್ಸಿನ ಮಕ್ಕಳಿಗೆ ಲೋಕಜ್ಞಾನ ಅರ್ಥವಾಗುವ ಮೊದಲ ಹಂತ. ಇನ್ನೂ ಅತ್ತ ಯೌವನಾವಸ್ಥೆಯೂ ಅಲ್ಲ….. ಬಾಲ್ಯಾವಸ್ಥೆಯೂ ಅಲ್ಲ….. ಈ ವಯಸ್ಸಿನ ಮಕ್ಕಳು ಆಟ, ಪಾಠ ಅಂತ ಅಂದ್ಕೊಂಡು ಇದ್ದು ಬಿಡ್ತಾರೆ. ಆದರೆ ರಿತಜ್ ಹುಸೈನ್ ಅಲ್ಹಜ್ಮಿ, ಸಂಪೂರ್ಣವಾಗಿ ಬರವಣಿಗೆಯತ್ತ ಗಮನ ಹರಿಸಿದಳು. ಆಕೆಯ ಶ್ರದ್ಧೆ, ಪರಿಶ್ರಮದ ಫಲ ಮೂರು ಪುಸ್ತಕಗಳು ಈಗ ಮುದ್ರಣಗೊಂಡಿವೆ. ಒಂದೇ ಒಂದು ಪುಸ್ತಕ ಪ್ರಕಟಗೊಂಡರೆ ಸಾಕು ಅಂತ ಅಂದುಕೊಳ್ಳೊರಿಗೆ, ರಿತಜ್ ಹುಸೈನ್ ಅಲ್ಹಜ್ಮಿ ಮಾದರಿಯಾಗಿದ್ದಾಳೆ. ಈಕೆಯ ಹೆಸರಲ್ಲಿ ಮೂರು ಉಪನ್ಯಾಸ ಪುಸ್ತಕಗಳು ಪ್ರಕಟಗೊಂಡಿದ್ದು, ಈಗ ಆಕೆಯ ಹೆಸರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್‌ನಲ್ಲಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಉಪನ್ಯಾಸ ಪುಸ್ತಕಗಳನ್ನ ಬರೆದ ಲೇಖಕಿ, ಅನ್ನೋ ಹೆಸರಿನಲ್ಲಿ ದಾಖಲಾಗಿದೆ. “ ಗಿನ್ನಿಸ್ ಬುಕ್‌ಆಫ್ ವರ್ಲ್ಡ್ ರಿಕಾರ್ಡ್‌ನಲ್ಲಿ ನನ್ನ ಹೆಸರಿನ ಈ ಸಾಧನೆ ನಾನು ಯುವ ಬರಹಗಾರರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಾನು ಯುವ ಬರಹಗಾರರು ಸವಾಲುಗಳನ್ನ ಎದುರಿಸುವ, ಅಡೆತಡೆಗಳನ್ನ ಮೆಟ್ಟಿನಿಲ್ಲುವ ಹಾಗೂ ಇನ್ನೂ ಹೆಚ್ಚು ಬರವಣಿಗೆಯತ್ತ ಚಿತ್ತ ಹರಿಸಲು ನಾನು ಈ ಮೂಲಕ ಹೇಳಲು ಬಯಸುತ್ತೇನೆ.“ ಎಂದು ರಿತಜ್ ಹುಸೈನ್ ಅಲ್ಹಜ್ಮಿ ಹೇಳಿಕೊಂಡಿದ್ದಾಳೆ. ಸೌದಿ ಅರಬ್ ಪೂರ್ವಪ್ರಾಂತ್ಯದ ಧಹರಾನ್‌ನಲ್ಲಿ ಹುಟ್ಟಿರೋ ಅಲ್ಹಜ್ಮಿ, ಅರಬ್ಬಿ ಹಾಗೂ ಆಂಗ್ಲಭಾಷೆಯಲ್ಲಿ ಪರಿಣಿತಳಾಗಿದ್ದಾಳೆ. ತನ್ನ ಈ ಬರವಣಿಗೆಯ ಕಲೆಯನ್ನ ಜೆಕೆ ರಾವಲಿಂಗ ಮತ್ತು ಜೊಆನ್ ರೆಂಡೆಲ್ ಅಂತಹ ಮಹಾನ್ ಲೇಖಕರಿಗೆ ಅರ್ಪಿಸುತ್ತಾಳೆ. ಈಕೆ ಏಳು ವರ್ಷ ಇರುವಾಗಲೇ ಸೌದಿಯಲ್ಲಿರೋ ಅನೇಕ ಪುಸ್ತಕಾಲಯಗಳಿಗೆ ಭೇಟಿ ಕೊಟ್ಟಿದ್ದಾಳೆ. ಅಲ್ಲಿದ್ದ ಅನೇಕ ಚಿಕ್ಕ ಚಿಕ್ಕ ಕಥೆ ಪುಸ್ತಕ ಓದಿ ಪ್ರೇರಣೆ ಪಡದೇ ಇಂದು ಉಪನ್ಯಾಸ ಪುಸ್ತಕಗಳನ್ನ ಬರೆಯುವಷ್ಟು ಪರಿಪಕ್ವಳಾಗಿದ್ದಾಳೆ. ಅಲ್ಹಜ್ಮಿ ಈಕೆಯ ಮೊದಲ ಉಪನ್ಯಾಸ ಪುಸ್ತಕದ ಹೆಸರು ‘ಖೋಯಾ ಸಾಗರ ಕಾ ಖಜಾನಾ‘ (ಕಳೆದು ಹೋದ ಸಮುದ್ರದ ಖಜಾನೆ) ಇದು 2019ರಲ್ಲಿ ಪ್ರಕಟಗೊಂಡಿತ್ತು. ಈಕೆಯ ಎರಡನೇ ಪುಸ್ತಕ ‘ಛಿಪಿ ಹುವಿ ದುನಿಯಾಕಾ ಪೊರ್ಟಲ್’( ವಿಶ್ವದ ಮುಚ್ಚಿಟ್ಟ ಹೆಬ್ಬಾಗಿಲು) ಇದು ಕೂಡಾ ಅದೇ ವರ್ಷ ಪ್ರಕಟವಾಗಿತ್ತು. ಇನ್ನೂ 2020ರಲ್ಲಿ ‘ಭವಿಷ್ಯ ಕಿ ದುನಿಯಾ’ (ಭವಿಷ್ಯದ ವಿಶ್ವ) ಈ ಪುಸ್ತಕ . ಇನ್ನೂ ಈಗ ನಾಲ್ಕನೇ ಪುಸ್ತಕ ಬರೀತಾ ಇರೋ ಅಲ್ಹಜ್ಮಿ ಆ ಪುಸ್ತಕದ ಹೆಸರು ಅಜ್ಞಾತ ಕೆ ಲಿಯೆ ಮಾರ್ಗ(ಅಜ್ಞಾತಕ್ಕಾಗಿ ಮಾರ್ಗ). ಇದೇ ರೀತಿ ಭವಿಷ್ಯದಲ್ಲಿ ಇನ್ನೂ ಅನೇಕ ಪುಸ್ತಕಗಳನ್ನ ಬರೆಯುವ ಉದ್ದೇಶ ಹೊಂದಿರೋ ಈ 13 ವರ್ಷದ ಪೋರಿ ಬೇರೆಯವರಿಗೆ ಮಾದರಿಯಾಗಿದ್ದಾಳೆ. الثاني من مايو يصادف اليوم الذي شهدتُ فيه محاولة تحقيق لقب 'أصغر كاتبة سلسلة كتب' في #غينيس للأرقام القياسيةMay 2nd marks the day where I witnessed the attempt of achieving a record titled ‘youngest series writer’ in #Guinness World Records#ريتاج_الحازمي pic.twitter.com/LjQZAsCxvn — Ritaj Alhazmi ريتــاج الحازمي (@ritajalhazmi) May 3, 2022 أكملت كتابي الجديد 'العبور الى المجهول' وسيتم نشره قريباCompleted my new book ‘The Passage to the Unknown’ and will be published soon. #ريتاج_الحازمي pic.twitter.com/7NZbG6kSZm — Ritaj Alhazmi ريتــاج الحازمي (@ritajalhazmi) June 10, 2022