ಕತ್ತಲನ್ನು ದೂರ ಮಾಡಿ ಬೆಳಕನ್ನು ನೀಡುವವನು ಸೂರ್ಯ. ಹಿಂದೂ ಧರ್ಮದಲ್ಲಿ ಸೂರ್ಯನಿಗೆ ದೇವರ ಪಟ್ಟ ನೀಡಲಾಗಿದೆ. ಪ್ರತಿದಿನ ಸೂರ್ಯದೇವನ ಆರಾಧನೆ ಮಾಡುವುದ್ರಿಂದ ಮಾನ-ಸನ್ಮಾನ, ಗೌರವ, ಸಮೃದ್ಧಿ ಪ್ರಾಪ್ತಿಯಾಗುತ್ತದೆ.
ಪ್ರತಿದಿನ ಸೂರ್ಯ ದೇವನ ಪೂಜೆ ಮಾಡುವುದ್ರಿಂದ ಮನಸ್ಸಿನಲ್ಲಿ ನೆಮ್ಮದಿ ಸೃಷ್ಟಿಯಾಗುತ್ತದೆ. ಸೂರ್ಯದೇವನ ಪೂಜೆ ಮಾಡುವುದ್ರಿಂದ ವ್ಯಕ್ತಿ ರೋಗಮುಕ್ತನಾಗಿ ಶಕ್ತಿವಂತನಾಗ್ತಾನೆ.
ಭಾನುವಾರ ಸೂರ್ಯ ನಮಸ್ಕಾರ, ಪ್ರದಕ್ಷಿಣಿ, ಸೂರ್ಯ ಮಂತ್ರ ಪಠಣ ಮಾಡುವುದ್ರಿಂದ ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ.
ಸೂರ್ಯ ದೇವನಿಗೆ ಪೂಜೆ ಮಾಡುವ ವೇಳೆ ತಲೆಯನ್ನು ನೆಲಕ್ಕೆ ತಾಗಿಸುವುದ್ರಿಂದ ಎಲ್ಲ ಪಾಪಗಳು ನಾಶವಾಗುತ್ತವೆ.
ಸೂರ್ಯ ದೇವನ ಪೂಜೆ ಜೊತೆಗೆ ತನು-ಮನದಿಂದ ಪರಿಕ್ರಮ ಮಾಡಿದ್ರೆ ರೋಗ ನಿವಾರಣೆಯಾಗುತ್ತದೆ. ಬರಿ ಕಾಲಿನಲ್ಲಿ ಆರಾಧನೆ ಮಾಡಿದ್ರೆ ಫಲ ಜಾಸ್ತಿ.
ಭಾನುವಾರ ಕೆಂಪು ಹೂ ಹಾಗೂ ಬಿಳಿ ಕಮಲದಿಂದ ಪೂಜೆ ಮಾಡಬೇಕು.
ನಿರಂತರ ಸೂರ್ಯ ದೇವನ ಪೂಜೆ ಮಾಡುವುದ್ರಿಂದ ಭಯ ದೂರವಾಗಿ ವ್ಯಕ್ತಿ ಬಲಶಾಲಿಯಾಗ್ತಾನೆ.
ಸೂರ್ಯ ದೇವನ ಪೂಜೆಯಿಂದ ವಂಚನೆ, ಕೋಪ, ಅಹಂ, ದುರಾಸೆ, ಕೆಟ್ಟ ಆಲೋಚನೆಗಳು ದೂರವಾಗುತ್ತವೆ.
ಬೆಳಿಗ್ಗೆ ಸೂರ್ಯ ದೇವನಿಗೆ ಜಲ ಅರ್ಪಣೆ ಮಾಡಿ. ನೆಲಕ್ಕೆ ಬಿದ್ದ ನೀರನ್ನು ಕಣ್ಣಿಗೆ ಹಚ್ಚಿಕೊಳ್ಳಿ.