alex Certify OMG ! ಆಫ್‌ ಲೈನ್​ ಖರೀದಿಗಿಂತ ʼಜೊಮಾಟೊʼ ವೇ ದುಬಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG ! ಆಫ್‌ ಲೈನ್​ ಖರೀದಿಗಿಂತ ʼಜೊಮಾಟೊʼ ವೇ ದುಬಾರಿ

ಮಹಾನಗರಗಳಲ್ಲಿ ಫುಡ್​ ಡೆಲಿವರಿ ಉದ್ಯಮ ಖ್ಯಾತವಾಗಿದೆ. ತಾವಿರುವ ಸ್ಥಳಕ್ಕೆ ಫುಡ್​ ಆರ್ಡರ್​ ಮಾಡಿ ತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಲ್ಲೊಂದು ಶಾಕಿಂಗ್​ ನ್ಯೂಸ್​ ಇದೆ.

ಲಿಂಕ್ಡ್​ಇನ್​ ಬಳಕೆದಾರರು ಆನ್​ಲೈನ್​ ಮತ್ತು ಆಫ್​ಲೈನ್​ ರೆಸ್ಟೋರೆಂಟ್​ ಆರ್ಡರ್​ ಬಿಲ್​ಗಳನ್ನು ಹೋಲಿಸಿದ್ದಾರೆ. ಎರಡರ ನಡುವಿನ ಅಚ್ಚರಿ ಮೂಡಿಸುವ ಬೆಲೆಯ ವ್ಯತ್ಯಾಸವನ್ನು ಕಂಡುಹಿಡಿದಿದ್ದಾರೆ.

ಮಾರ್ಕೆಟಿಂಗ್​ ಮ್ಯಾನೇಜರ್​ ರಾಹುಲ್​ ಕಾಬ್ರಾ ಒಂದೇ ರೀತಿಯ ಫುಡ್​ ಬಿಲ್​ನ ಎರಡು ಇಮೇಜ್​ಗಳನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ವೆಜಿಟೆಬಲ್​ ಫ್ರೈಡ್​ ರೈಸ್​ ಮತ್ತು ಮಶ್ರೂಮ್​ ಮೊಮೊಗಳನ್ನು ಒಳಗೊಂಡಿರುವ ಮೆನುವಿನ ಮಾಹಿತಿ ಅದರಲ್ಲಿದೆ.

ಜಿಎಸ್ಟಿ, ಸಿಜಿಎಸ್ಟಿ ಒಳಗೊಂಡಂತೆ ಆಫ್​ ಲೈನ್​ ಆರ್ಡರ್​ಗಳಿಗೆ ಒಟ್ಟು ಶುಲ್ಕ 512 ರೂ. ಇದ್ದರೆ, ಜೊಮಾಟೊದಲ್ಲಿ ಅದೇ ಪದಾರ್ಥ ತರಿಸಿದಾಗ ಶುಲ್ಕ 689.90 ರೂ. ಆಗಿದೆ. ಅದೂ 75 ರೂ. ರಿಯಾಯಿತಿಯನ್ನು ಅನ್ವಯಿಸಿದ ನಂತರ ಇಷ್ಟು ಮೊತ್ತವಾಗಿದೆ. ಜೊಮಾಟೊ ಆ ಆರ್ಡರ್​ನಲ್ಲಿ ಶೇಕಡಾ 34.76 ರಷ್ಟು (ರೂ. 178) ಶುಲ್ಕ ವಿಧಿಸಿದೆ.

ಈ ವೆಚ್ಚದ ಹೆಚ್ಚಳಕ್ಕೆ ಮಿತಿ ಹಾಕುವ ಕೆಲಸ ಆಗಬೇಕು, ಸರ್ಕಾರವು ಈ ಕೆಲಸ ಮಾಡಬೇಕೆಂದು ಕಾಬ್ರಾ ಹೇಳಿದ್ದಾರೆ. ಅವರ ಪೋಸ್ಟ್​ ವೈರಲ್​ ಆಗಿದ್ದು, 7,600ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮತ್ತು ಸುಮಾರು 1,000 ಕಾಮೆಂಟ್​ಗಳು ಬಂದಿವೆ.

Zomato Post

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...