ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆ ಬೀಚ್ನಲ್ಲಿ ಕೆಂಪು ಬಣ್ಣದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರೋಶನ್ ಆಚಾರ್ಯ ಶವ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ನಿಯಂತ್ರಣ ತಪ್ಪಿದ ಪರಿಣಾಮ ನಾಲ್ವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್ ಕಾರು ಮರವಂತೆ ಕಡಲಿಗೆ ಹಾರಿತ್ತು.
ಕೋಟೇಶ್ವರ ಮೂಲದ ವಿರಾಜ್ ಆಚಾರ್ಯ ಸೀಟ್ ಬೆಲ್ಟ್ ಧರಿಸಿದ್ದ ಪರಿಣಾಮ ಅವರ ಮೃತದೇಹ ಕಾರಿನಲ್ಲಿಯೇ ಪತ್ತೆಯಾಗಿತ್ತು. ಇದೇ ಕಾರಿನಲ್ಲಿದ್ದ ಕಾರ್ತಿಕ್ ಹಾಗೂ ಸಂದೀಪ್ ಪ್ರಾಣಾಪಾಯದಿಂದ ಪಾರಾಗಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಇದೇ ಕಾರಿನಲ್ಲಿದ್ದ ರೋಶನ್ ಆಚಾರ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದರು. ಇವರ ಶವಕ್ಕಾಗಿ ಗಂಗೊಳ್ಳಿ ಠಾಣೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಇಂದು ರೋಶನ್ ಆಚಾರ್ಯ ಮೃತದೇಹ ಹೊಸಾಡು ಬಳಿಯ ಕಂಚುಗೋಡು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.