alex Certify ಸಫಾರಿ ವೇಳೆ ಫೋಟೋ ಕ್ಲಿಕ್ಕಿಸುತ್ತಿದ್ದವರಿಗೆ ಶಾಕ್​ ನೀಡಿದ ಚಿರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಫಾರಿ ವೇಳೆ ಫೋಟೋ ಕ್ಲಿಕ್ಕಿಸುತ್ತಿದ್ದವರಿಗೆ ಶಾಕ್​ ನೀಡಿದ ಚಿರತೆ

ವನ್ಯಜೀವಿಗಳು ಆಫ್ರಿಕಾದಲ್ಲಿ ವಾಹನಗಳ ಸಂಚಾರಕ್ಕೆ ಎಷ್ಟು ಒಗ್ಗಿಕೊಂಡಿವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಅಲ್ಲಿ ಪ್ರಾಣಿಗಳು ವಾಹನವನ್ನು ನಿರ್ಲಕ್ಷಿಸುತ್ತವೆ, ಪ್ರವಾಸಿಗರು ಈ ಪ್ರಾಣಿಗಳ ವೈಭವವನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತವೆ.

ಐಎಫ್ಎಸ್​ ಅಧಿಕಾರಿ ಸುರೇಂದರ್​ ಮೆಹ್ರಾ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಅಂತಹ ಒಂದು ವಿಡಿಯೊದಲ್ಲಿ, ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸಾರಿ ಜೀಪ್​ ಮೇಲೆ ಚಿರತೆಯೊಂದು ಹತ್ತುತ್ತಿರುವುದನ್ನು ಕಾಣಬಹುದು. ಆ ಚಿರತೆ ವಾಹನದ ಮೇಲೆ ಹಾರಿದ್ದು, ಈ ವೇಳೆ ದಿಗ್ಭ್ರಮೆಗೊಂಡ ಪ್ರವಾಸಿಗರು ಅದನ್ನು ಹತ್ತಿರದಿಂದ ಚಿತ್ರೀಕರಿಸಲು ಪ್ರಾರಂಭಿಸಿದರು.

ವಾಹನದ ಹಿಂಬದಿಯಲ್ಲಿ ಅಳವಡಿಸಲಾಗಿರುವ ಚಕ್ರದ ಮೇಲೆ ಎಗರುವ ಚಿರತೆ ನಂತರ ವಾಹನದೊಳಗೆ ಪ್ರವೇಶ ಮಾಡಿ ಕೊನೆಗೆ ಟಾಪ್​ ಮೇಲೆ ಏರುತ್ತದೆ ಅಲ್ಲಿಂದಲೇ ಇಡೀ ಪ್ರದೇಶವನ್ನು ತನ್ನ ಕಣ್ಣಲ್ಲಿ ಸ್ಕ್ಯಾನ್​ ಮಾಡುತ್ತದೆ.

ಇಲ್ಲಿಯವರೆಗೆ ಈ ವಿಡಿಯೊವನ್ನು ಸಾಕಷ್ಟುಮಂದಿ ವೀಕ್ಷಿಸಿದ್ದು, ಅನೇಕ ಜನರು ಅದರ ಬಗ್ಗೆ ಕಾಮೆಂಟ್​ ಮಾಡಿದ್ದಾರೆ. ಚಿರತೆ ಈಗ ಅದ್ಭುತವಾದ ವೀಕ್ಷಣಾ ವೇದಿಕೆಯನ್ನು ಹೊಂದಿದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಸಫಾರಿಯಲ್ಲಿರುವ ಪ್ರವಾಸಿಗರು ನಿಸ್ಸಂದೇಹವಾಗಿ ತಮ್ಮ ಕಾರಿನೊಳಗೆ ಚಿರತೆ ಹತ್ತಿದ ನಂತರ ಆ ಪ್ರವಾಸದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಪಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...