ತನ್ನ ತಂದೆಯೊಂದಿಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿ ಆಕಸ್ಮಿಕವಾಗಿ ಬೈಕಿನಿಂದ ಬಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಹರಿದು ಆಕೆ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
5ನೇ ತರಗತಿ ವಿದ್ಯಾರ್ಥಿನಿ ರಮ್ಯಾ ಸಾವನ್ನಪ್ಪಿದ ನತದೃಷ್ಟೆಯಾಗಿದ್ದು, ಈಕೆ ತನ್ನ ತಂದೆ ಸುಕುಮಾರ್ ಜೊತೆ ಒನಗರಮ್ ನಲ್ಲಿರುವ ಸಂಬಂಧಿಕರ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದಳು.
ಇವರುಗಳು ಪೊನ್ನಮಲೈ ಹೈವೇ ಬಳಿ ಇದ್ದಾಗ ದಾರಿಹೋಕನೊಬ್ಬ ಏಕಾಏಕಿ ಬೈಕಿಗೆ ಎದುರಾಗಿದ್ದಾನೆ. ಹೀಗಾಗಿ ಇಬ್ಬರೂ ಕೆಳಗೆ ಬಿದ್ದಿದ್ದು ಈ ವೇಳೆ ಹಿಂದಿನಿಂದ ಬಂದ ಲಾರಿ ರಮ್ಯಾ ಮೇಲೆ ಹರಿದಿದೆ. ಇದರ ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಕೊಯಂಬೇಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿದ್ದಾರೆ.