ಪಾಟ್ನಾ: ಮೆಟ್ಟಿಲುಗಳಿಂದ ಬಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಬಲ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ಪಾಟ್ನಾದಲ್ಲಿರುವ ತಮ್ಮ ಪತ್ನಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಏಣಿಯಿಂದ ಜಾರಿ ಬಿದ್ದಿದ್ದಾರೆ. ಆರ್.ಜೆ.ಡಿ. ಮುಖ್ಯಸ್ಥರಾದ ಲಾಲು ಭುಜ ಮತ್ತು ಬೆನ್ನಿಗೆ ಗಾಯಗಳಾಗಿದ್ದು, ತೀವ್ರ ಪೆಟ್ಟಾಗಿದೆ. ಬಲ ಭುಜದಲ್ಲಿ ಮೂಳೆ ಮುರಿದಿದೆ ಎನ್ನಲಾಗಿದೆ.
ಲಾಲು ಯಾದವ್ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೆ ಕೆಳಗೆ ಬಿದ್ದು ಬಲ ಭುಜ ಮತ್ತು ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
MRI ಸ್ಕ್ಯಾನ್ ಮೂಲಕ ಅವರ ಬಲ ಭುಜದಲ್ಲಿ ಮುರಿತವಾಗಿರುವುದು ಗೊತ್ತಾಗಿದ್ದು, ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ.