ಈಜಿಪ್ಟ್ನ ಜನಪ್ರಿಯ ಪ್ರವಾಸಿ ಬೀಚ್ ನಲ್ಲಿ ಶಾರ್ಕ್ಗಳು ಈಜುಗಾರರ ಮೇಲೆ ದಾಳಿ ಮಾಡಿದ್ದು, ಇಬ್ಬರನ್ನು ಬಲಿ ಪಡೆದಿವೆ.
ಟೂರಿಸ್ಟ್ ಬೀಚ್ ನಲ್ಲಿ ಶಾರ್ಕ್ ನಡೆಸಿದ ಭಯಾನಕ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಘಟನೆ ನಡೆದ ಕೇವಲ 650 ಅಡಿಗಳಷ್ಟು ದೂರದಲ್ಲಿ ಮತ್ತೊಂದು ಶಾರ್ಕ್ ನಡೆಸಿದ ದಾಳಿಯಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.
ಮೊದಲಿಗೆ 68 ವರ್ಷ ವಯಸ್ಸಿನ ಆಸ್ಟ್ರಿಯನ್ ಮಹಿಳೆಯೊಬ್ಬರ ಮೇಲೆ ಶಾರ್ಕ್ ದಾಳಿ ಮಾಡಿ ಕೈ ಮತ್ತು ಕಾಲು ಕಚ್ಚಿದೆ. ರಕ್ತದಿಂದ ನೀರು ಕೆಂಪಾಗಿತ್ತು. ಹರ್ಘಡಾದ ದಕ್ಷಿಣದಲ್ಲಿರುವ ಸಹಲ್ ಹಶೀಶ್ ನಲ್ಲಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮತ್ತೊಂದು ಶಾರ್ಕ್ ಮಾರಣಾಂತಿಕ ದಾಳಿಯಿಂದ ಎರಡನೇ ಪ್ರವಾಸಿ ಮಹಿಳೆ ಪ್ರವಾಸಿಗರು ಕೊಲ್ಲಲ್ಪಟ್ಟರು ಎಂದು ಈಜಿಪ್ಟ್ ಅಧಿಕಾರಿಗಳು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಾರ್ಕ್ ದಾಳಿಯಿಂದ ಸಮುದ್ರದಲ್ಲೇ ಮಹಿಳೆ ಮೃತಪಟ್ಟಿದ್ದು, ನಂತ ಸಮುದ್ರದಿಂದ ಮೃತದೇಹ ಹೊರತೆಗೆಯಲಾಯಿತು.
ಆಕೆಯ ಗುರುತು ಮತ್ತು ರಾಷ್ಟ್ರೀಯತೆಯನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಅವರು ಪ್ರೀಮಿಯರ್ ಲೆ ರೆವ್ ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದರು ಎಂದು ಹೇಳಲಾಗಿದೆ. ಮೊದಲ ದಾಳಿಯ ನಂತರದ ಪರಿಣಾಮಗಳನ್ನು ಚಿತ್ರೀಕರಿಸಿದ ರಷ್ಯಾದ ಪ್ರವಾಸಿಗರು ಎರಡನೇ ಮಾರಣಾಂತಿಕ ಘಟನೆಯ ಸ್ಥಳವನ್ನು ತೋರಿಸುವ ಹೊಸ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.