ಬೇಕಾಗುವ ಪದಾರ್ಥಗಳು :
1 ಬಟ್ಟಲು ಮೈದಾ ಹಿಟ್ಟು, 1 ಮೊಟ್ಟೆ, 5 ಟೇಬಲ್ ಚಮಚ ಸಕ್ಕರೆ, 2 ಟೀ ಚಮಚ ತುಪ್ಪ, ಚಿಟಿಕೆ ಉಪ್ಪು, 2 ತೊಟ್ಟು ವೆನಿಲಾ ಎಸೆನ್ಸ್
ತಯಾರಿಸುವ ವಿಧಾನ :
ಮೈದಾ ಹಿಟ್ಟಿಗೆ ಉಪ್ಪು ಹಾಗೂ ತುಪ್ಪ ಬೆರೆಸಿ. ಮೊಟ್ಟೆಯಲ್ಲಿನ ಬಿಳಿ ಭಾಗವನ್ನಷ್ಟೇ ಸೇರಿಸಿ. ನಂತರ ಸಕ್ಕರೆ, ವೆನಿಲಾ, ಮೊಟ್ಟೆಯ ಹಳದಿ ಭಾಗ ಹಾಕಿ ಕಲೆಸಿ. ಇದು ಚಪಾತಿ ಹಿಟ್ಟಿನಂತೆ ತಯಾರಾದ ನಂತರ ಹಿಟ್ಟಿನ ಮುದ್ದೆಯಿಂದ ಅರ್ಧ ಇಂಚು ದಪ್ಪದ ಚಪಾತಿ ಲಟ್ಟಿಸಿ.
ಚಾಕುವಿನಿಂದ ಡೋನಟ್ ಕೊಯ್ದು ಡಾಲ್ಡಾದಲ್ಲಿ ಕೆಂಪಗೆ ಕರಿಯಿರಿ. ಇದರ ಮೇಲೆ ಕ್ರೀಮ್ ಗಳು, ಚಾಕೊಲೇಟ್ ರಸ ಹಾಕಿ ಅಲಂಕರಿಸಿ ಸವಿಯಲು ಕೊಡಿ.