ಮನೆಯಲ್ಲಿರುವ ಪ್ರತಿಯೊಂದು ವಸ್ತು ಮನೆಯವರ ಮೇಲೆ ಪರಿಣಾಮ ಬೀರುತ್ತದೆ. ಅದ್ರಲ್ಲಿ ಕನ್ನಡಿ ಕೂಡ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕನ್ನಡಿಯಿರುತ್ತದೆ. ಆದ್ರೆ ಮನೆಯಲ್ಲಿರುವ ಕನ್ನಡಿ ನಮ್ಮ ನೆಮ್ಮದಿ ಹಾಳು ಮಾಡಬಹುದು. ಹಾಗಾಗಿ ಕನ್ನಡಿಯನ್ನು ವಾಸ್ತು ಪ್ರಕಾರ ಇಡಬೇಕು.
ತಪ್ಪಾದ ದಿಕ್ಕಿನಲ್ಲಿ ಇಡುವ ಕನ್ನಡಿ ದಾಂಪತ್ಯಕ್ಕೆ ಅಡ್ಡಿಯುಂಟು ಮಾಡಬಹುದು. ಹಾಗಾಗಿ ಮಲಗುವ ಕೋಣೆಯ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮಾತ್ರ ಕನ್ನಡಿಯನ್ನು ಹಾಕಿ.
ಮನೆಯ ಮುಖ್ಯ ದ್ವಾರದಲ್ಲಿ ಎಂದಿಗೂ ಕನ್ನಡಿ ಇಡಬೇಡಿ. ಮನೆ ಮುಖ್ಯ ದ್ವಾರದ ಮುಂದೆ ಮುಖ ಕಾಣಿಸುವ ಗಾಜಿನ ವಸ್ತುವನ್ನು ಕೂಡ ಇಡಬೇಡಿ.
ಅನೇಕರು ಮನೆಯಲ್ಲಿ ಕನ್ನಡಿಯನ್ನು ಮನಸ್ಸಿಗೆ ಬಂದ ಸ್ಥಳದಲ್ಲಿ ಇಡುತ್ತಾರೆ. ಆದ್ರೆ ಅದು ತಪ್ಪು. ಕನ್ನಡಿ ಮೇಲೆ ಸೂರ್ಯನ ಕಿರಣ ಬೀಳಬಾರದು.ಇದು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಮನೆಯ ನೆಮ್ಮದಿ, ಶಾಂತಿ ನಾಶವಾಗುತ್ತದೆ. ವಾಶ್ ಬೇಸಿನ್ ಮೇಲ್ಬಾಗದಲ್ಲಿ ಕನ್ನಡಿ ಇಡುವುದು ಒಳ್ಳೆಯದು.
ಆಯತಾಕಾರದ ಕನ್ನಡಿಯನ್ನು ಮನೆಗೆ ಹಾಕಿ. ಎಂದೂ ಗೋಲದ ಕನ್ನಡಿಯನ್ನು ಹಾಕಬೇಡಿ. ಮನೆಯ ಯಾವುದೇ ಭಾಗದಲ್ಲಿ ಗೋಲಾಕಾರದ ಕನ್ನಡಿ ಹಾಕಿದ್ರೂ ಅದು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಹಾಗೆ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬೇಡಿ. ಕನ್ನಡಿ ಒಡೆದಿದ್ದರೆ ಅಥವಾ ಮಾಸಿದ್ದರೆ ತಕ್ಷಣ ಅದನ್ನು ಕಸಕ್ಕೆಸೆಯಿರಿ.