ಮದುವೆ…… ಎರಡು ಜೀವಗಳನ್ನು ಬೆಸೆಯೋ ಮಹಾಯಜ್ಞ. ಎರಡು ಕುಟುಂಬಗಳನ್ನ ಒಂದಾಗಿಸೋ ಮಹಾಸಂಭ್ರಮ. ಅರ್ಧಾಂಗಿಯನ್ನು ಅಂಗೀಕರಿಸೋ ದೈವಕಾರ್ಯ. ಆದರೆ ಈ 21ನೇ ಶತಮಾನದಲ್ಲಿ ಮದುವೆ ಚಿತ್ರಣ ಬದಲಾಗಿದೆ. ಆದರೆ ಭಾವಾರ್ಥ ಮಾತ್ರ ಒಂದೇ ಆಗಿದೆ.
ಇದು 21ನೇಶತಮಾನ, ಗಂಡು-ಹೆಣ್ಣು ಸಮಾನ ಅನ್ನುವ ಮನೋಭಾವ ಇರುವಂತಹ ಕಾಲಘಟ್ಟ ಇದು. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಗಂಡು-ಹೆಣ್ಣು ಸರಿಸಮಾನ ಎಂದು ಪರಿಗಣಿಸಲಾಗುತ್ತೆ. ಅಂತಹದ್ದರಲ್ಲಿ ಮದುವೆಯಲ್ಲೂ ಗಂಡು-ಹೆಣ್ಣು ಸಮಾನರು ಅನ್ನೋದ್ರಲ್ಲಿ ಇಲ್ಲಿ ಒಂದು ಜೋಡಿ ಸಮಾಜಕ್ಕೆ ಮಾದರಿಯಾಗಿದೆ.
ಅದು ವಧು ದಿತಿ ಗೊರಾಡಿಯಾ ಮತ್ತು ವರ ಅರ್ನವ್ರಾಯ್, ಇವರಿಬ್ಬರ ಮದುವೆ ಸಮಾರಂಭ. ಕೆಲವೇ ಕೆಲವು ಗೆಳೆಯರು, ಗೆಳತಿಯರು, ಕುಟುಂಬದ ಸದಸ್ಯರು ಆ ಸಮಾರಂಭದಲ್ಲಿ ಇದ್ದರು. ಪೂಜಾರಿ ಸಂಪ್ರದಾಯಬದ್ಧವಾಗಿ ಪೂಜಾಕಾರ್ಯಗಳನ್ನ ಒಂದೊಂದಾಗಿ ಗಂಡು-ಹೆಣ್ಣಿನ ಕೈಯಿಂದ ಮಾಡಿಸುತ್ತಿದ್ದರು.
ಎಲ್ಲ ಪದ್ಧತಿಯಂತೆ ಹೆಣ್ಣು, ಗಂಡನ್ನ ದೈವ ಸಮಾನ ಅಂತ ಭಾವಿಸಿಕೊಂಡು ಪಾದ ಸ್ಪರ್ಶ ಮಾಡಬೇಕಿತ್ತು. ಆದರೆ ಆ ಕ್ಷಣದಲ್ಲಿ ವರಮಹಾಶಯನಿಗೆ ಅದೇನು ಅನ್ನಿಸಿತೋ ಏನೋ ತನ್ನ ಸಂಗಾತಿಯ ಪಾದವನ್ನ ನಗುನಗುತ್ತಲೇ ಸ್ಪರ್ಶಿಸಿದ್ದ. ಆ ಒಂದು ಕ್ಷಣ ಅನೇಕರ ಮನಸ್ಸನ್ನ ಗೆದ್ದಿತ್ತು. ಇನ್ನೂ ಕೆಲವರಿಗೆ ಇದು ವಿಚಿತ್ರ ಕೂಡಾ ಅನಿಸಿತು.
ವಧು ದಿತಿ ಗೊರಾಡಿಯಾ ಮತ್ತು ವರ ಅರ್ನವ್ರಾಯ್ ಅನೇಕರಿಗೆ ಮಾದರಿಯಾಗಿದ್ದಾರೆ. ಇವರದ್ದು ಲವ್ ಮ್ಯಾರೇಜ್, ಇತ್ತೀಚೆಗೆ ʼಹ್ಯೂಮನ್ಸ್ ಆಫ್ ಬಾಂಬೆʼ ಅನ್ನೋ ಸೋಶಿಯಲ್ ಮೀಡಿಯಾ ಜೊತೆಗೆ ತಮ್ಮ ಪ್ರೇಮ್ ಕಹಾನಿಯನ್ನ ಹಂಚಿಕೊಂಡಿದ್ದಾರೆ. “ ನೀವು ಯಾರನ್ನಾದರೂ ಯಾಕೆ ಭೇಟಿಯಾಗುತ್ತಿರಿ ? ಅವರೇ ನಿಮ್ಮ ಜೀವನ ಸಂಗಾತಿಗಳಾಗಿರ್ತಾರೆ ಅನ್ನೋದು ನಿಮಗೆ ಮೊದಲೇ ತಿಳಿದಿರುತ್ತಾ? ನನಗೂ ಮತ್ತು ಅರ್ನವ್ ಅವರಿಗೂ ಇದ್ಯಾವುದರದ್ದೂ ಅರಿವೆಯೇ ಇರಲಿಲ್ಲ. ಅರ್ನವ್ ಪಾರ್ಟಿ ಪ್ರಿಯರು. ನನ್ನದು ಏಕಾಂತ ಬಯಸುವ ವ್ಯಕ್ತಿತ್ವ. ಇಬ್ಬರದ್ದು ತದ್ವಿರುದ್ಧ ವ್ಯಕ್ತಿತ್ವ. ನಮ್ಮಿಬ್ಬರದ್ದು ಅನಿರೀಕ್ಷಿತ ಭೇಟಿ. ಮೊದಲ ಭೇಟಿಯಲ್ಲಿ ಆದ ಪರಿಚಯ, ಕೊನೆಗೆ ಗೆಳೆತನದಲ್ಲಿ ಬದಲಾಯಿತು. ಆ ನಂತರ ಒಬ್ಬರನ್ನೊಬ್ಬರು ಅರಿತ ನಾವು ಪ್ರೀತಿಸತೊಡಗಿದ್ದವು.“ ಎಂದು ದಿತಿ ಗೊರಾಡಿಯಾ ಅವರು ಹೇಳಿಕೊಂಡಿದ್ಧಾರೆ.
ನಾವಿಬ್ಬರು ಮೂಲತಃ ಮುಂಬೈನವರು. ಇವರು ಪರಿಚಯವಾದ ಕೆಲವೇ ಕೆಲವು ದಿನಗಳಲ್ಲಿ ಒಂದು ವಿಚಿತ್ರ ಆಟವನ್ನ ಆಡಲು ನನಗೆ ಕರೆದರು. ಈ ಆಟದಲ್ಲಿ ಸೋತವರು ಕಾಫಿ ಕುಡಿಸುವುದು ಅನ್ನೋ ಕಂಡಿಶನ್ ಹಾಕಲಾಗಿತ್ತು. ಆ ಆಟದಲ್ಲಿ ನಾನು ಸೋತಿದ್ದೆ. ಆಗ ನಾವು ಪರಸ್ಪರ ಫೋನ್ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದೇವು. ಮರುದಿನ ಕರೆ ಮಾಡಿದ ಅರ್ನಬ್ ಅವರು ತಮ್ಮ ಮನೆಗೆ ಕರೆದುಕೊಂಡು ಹೋಗಿ ಕಾಫಿ ಕುಡಿದೆವು. ಹೀಗೆ ನಮ್ಮ ಪ್ರೇಮಕಹಾನಿ ಶುರುವಾಯಿತು ಅಂತ ದಿತಿ ಹೇಳಿದರು.
ಈಗ ವಿವಾಹ ಬಂಧನಕ್ಕೆ ಒಳಗಾದ ದಿತಿ ಮತ್ತು ಅರ್ನಬ್ ಅವರ ಮದುವೆ ವಿಡಿಯೋ ವೈರಲ್ ಆಗಿದ್ದು, ಈ ಕ್ಲಿಪ್ 118k ಲೈಕ್ಗಳು ಮತ್ತು ಸಾವಿರಾರು ಜನರು ಭಿನ್ನಭಿನ್ನ ಭಾವದೊಂದಿಗೆ ಪ್ರತಿಕ್ರಿಯೆ ಕೊಡುತ್ತಿದ್ಧಾರೆ. ಒಟ್ಟಿನಲ್ಲಿ ಈ ಕ್ಯೂಟೆಸ್ಟ್ ಜೋಡಿ ಲಕ್ಷಾಂತರ ಜನರನ್ನ ಇಂಪ್ರೆಸ್ ಮಾಡಿದ್ದಂತೂ ಸುಳ್ಳಲ್ಲ.
https://youtu.be/ff7R-pnzOyU