
ಐಎಎಸ್ ಅಮೀರ್ ಖಾನ್ ಮತ್ತು ಟೀನಾ ದಾಬಿ ಅವರ ವಿಚ್ಛೇದನ ಸುದ್ದಿ ಇಡೀ ದೇಶದ ಗಮನ ಸೆಳೆದಿತ್ತು. ವಿಚ್ಛೇದನದ ಕೆಲವು ದಿನಗಳ ನಂತರ ಟೀನಾ ದಾಬಿ ಮತ್ತು ಡಾ. ಪ್ರದೀಪ್ ಗವಾಂಡೆ ಅವರು ಮರು ಮದುವೆಯಾಗಿದ್ದರು. ಅದಾದ ನಂತರ ಈಗ ಅಮೀರ್ ಖಾನ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ಧಾರೆ. ತಮ್ಮ ನಿಶ್ಚಿತಾರ್ಥದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಅಮೀರ್ ಅವರು ಮೆಹ್ರಿನ್ ಖಾಜಿಯವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ಧಾರೆ.
ನಿಶ್ಚಿತಾರ್ಥದ ಬಳಿಕ ಅಮೀರ್, ಮೆಹ್ರೀನ್ ಖಾಜಿ ಜೊತೆಗಿರುವ ಜೋಡಿಯ ಸುಂದರ ಫೋಟೋವನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಮೀರ್ ಅವರಿಂದ ವಿಚ್ಛೇದನ ಪಡೆದ ಬಳಿಕ ಟೀನಾ ದಾಬಿ ಇತ್ತೀಚೆಗಷ್ಟೇ ರಾಜಸ್ಥಾನ ಪುರಾತತ್ವ ಇಲಾಖೆಯ ನಿರ್ದೇಶಕ ಪ್ರದೀಪ್ ಗವಾಂಡೆ ಅವರನ್ನು ವಿವಾಹವಾಗಿದ್ದಾರೆ.
ಪ್ರಸ್ತುತ ಅಮೀರ್ ಅವರು ಶ್ರೀನಗರ ಸ್ಮಾರ್ಟ್ ಸಿಟಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೀನಾ ದಾಬಿಯಿಂದ ವಿಚ್ಛೇದನದ ನಂತರ ಅಮೀರ್ ತಮ್ಮ ವೈಯಕ್ತಿಕ ಜೀವನದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಅಮೀರ್ ಮತ್ತು ದಾಬಿ 2018ರಲ್ಲಿ ವಿವಾಹವಾಗಿದ್ದರು. ಆದರೆ, ಈ ಜೋಡಿ ಪರಸ್ಪರ ಒಪ್ಪಿಗೆಯ ಮೇರೆಗೆ 2021ರಲ್ಲಿ ವಿಚ್ಛೇದನ ಪಡೆದುಕೊಂಡು ದೂರವಾಗಿದ್ದರು.
ಮೆಹ್ರೀನ್ ಖಾಜಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋವನ್ನು ಅಮೀರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಹಾಗೂ ಈ ಜೋಡಿ ಈಗ ವೈರಲ್ ಆಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅನೇಕರು ಅಮೀರ್ ಅವರ ಮುಂದಿನ ವೈವಾಹಿಕ ಜೀವನಕ್ಕೆ ಶುಭಹಾರೈಸಿದ್ದಾರೆ. ಈ ಜೋಡಿಯ ಫೋಟೋಗೆ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಭಿನ್ನ ಭಿನ್ನ ರೀತಿಯಲ್ಲಿ ಅಭಿನಂದನೆ ಮಾಡಿದ್ದಾರೆ.