alex Certify ಕೆಲಸ ಕೊಡಿಸುವುದಾಗಿ ಕರೆದೊಯ್ದು ನೀಚ ಕೃತ್ಯವೆಸಗಿದ ಆರೋಪಿಗೆ ತಕ್ಕ ಶಾಸ್ತಿ, ಸಾಥ್ ನೀಡಿದ ಸ್ನೇಹಿತರಿಗೂ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕೊಡಿಸುವುದಾಗಿ ಕರೆದೊಯ್ದು ನೀಚ ಕೃತ್ಯವೆಸಗಿದ ಆರೋಪಿಗೆ ತಕ್ಕ ಶಾಸ್ತಿ, ಸಾಥ್ ನೀಡಿದ ಸ್ನೇಹಿತರಿಗೂ ಶಿಕ್ಷೆ

ಕೊಪ್ಪಳ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿತರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೊ) ಶಂಕರ ಎಂ. ಜಾಲವಾದಿ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದ 1 ನೇ ಆರೋಪಿ ಗದ್ದಿಗೇರಿ ತಾಂಡಾದ ಸಂತೋಷ ನಾಯಕ ಬಾಲಕಿಗೆ ಪ್ರೀತಿಸುತ್ತಿರುವುದಾಗಿ, ಅಮರೇಶ ನಾಯಕ ಹಾಗೂ ಲಕ್ಷ್ಮೀ ನಾಯಕ ಇವರ ಸಹಾಯದಿಂದ ದಿ: 24-04-2016 ರಂದು ಬಾಧಿತಳ ತಂದೆಗೆ ಕರೆ ಮಾಡಿ ನಿಮ್ಮ ಮಗಳಿಗೆ ಕೊಪ್ಪಳದಲ್ಲಿ ನರ್ಸ್ ಕೆಲಸ ಇದೆ ಎಂದು ಸುಳ್ಳು ಹೇಳಿ ಬಾಧಿತಳನ್ನು ಕೊಪ್ಪಳಕ್ಕೆ ಕರೆಸಿಕೊಂಡಿದ್ದನು.

ನಗರದ ಆಸ್ಪತ್ರೆಯಲ್ಲಿ ಬಾಧಿತಳು ಕೆಲಸ ನಿರಾಕರಿಸಿದ್ದಕ್ಕೆ ಒತ್ತಾಯಪೂರ್ವಕವಾಗಿ ಮೋಟಾರ್ ಸೈಕಲ್ ನಲ್ಲಿ ಹತ್ತಿಸಿಕೊಂಡು, ಅಪಹರಣ ಮಾಡಿಕೊಂಡು ಬೆಂಗಳೂರಿನ ಆನೇಕಲ್ ಗೆ ಹೋಗಿ ಮದುವೆಯಾಗಿದೆ ಎಂದು ಹೇಳಿ ಒಂದು ಬಾಡಿಗೆ ಮನೆಯನ್ನು ಪಡೆದು ರೂಮಿನಲ್ಲಿ ಕೂಡಿಹಾಕಿದ್ದ. ಪ್ರೀತಿಸುವಂತೆ ಒತ್ತಾಯ ಮಾಡಿ ಕೈಯಿಂದ ಹಲ್ಲೆ ಮಾಡಿದ್ದಲ್ಲದೇ, ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಲ್ಲಿ ಸಾಯಿಸುವುದಾಗಿ ಜೀವದ ಹೆದರಿಕೆ ಹಾಕಿದ್ದ.

ದಿ: 08-05-2016 ರಂದು ರಾತ್ರಿ ಬಾಧಿತ ಬಾಲಕಿಗೆ ಕೈ ಕಾಲು ಮತ್ತು ಬಾಯಿಗೆ ಬಟ್ಟೆ ಕಟ್ಟಿ ಬಲಾತ್ಕಾರ ಮಾಡಿದ್ದು ಮತ್ತು ಅವಳ ಕಿವಿಯಲ್ಲಿದ್ದ ಬಂಗಾರದ ಆಭರಣ, ಕಾಲಲ್ಲಿದ್ದ ಬೆಳ್ಳಿ ಚೈನುಗಳನ್ನು ಕಿತ್ತುಕೊಂಡು ಊಟ ಕೊಡದೆ ರೂಮ್ ನಲ್ಲಿ ಕೂಡಿ ಹಾಕಿದ್ದನು.

ಆರೋಪಿ ಅಮರೇಶ ಹಾಗೂ ಲಕ್ಷ್ಮೀ ನಾಯಕ ಇವರು ಸಂತೋಷ ನಾಯಕನಿಗೆ ಬಾಧಿತಳನ್ನು ಅಪಹರಣ ಮಾಡಿಕೊಂಡು ಹೋಗಲು ಪ್ರಚೋದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯಲ್ಲಿ ಆರೋಪಿತರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಆರೋಪಿತರ ವಿರುದ್ದ ಎಎಸ್ಐ ನಾಗಪ್ಪ ಇವರ ಸಹಾಯದೊಂದಿಗೆ ಕೊಪ್ಪಳ ನಗರ ಠಾಣೆ ಪಿಐ ಸತೀಶ ಪಾಟೀಲ ಇವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಗದ್ದಿಗೇರಿ ತಾಂಡಾದ ಮೊದಲನೇ ಆರೋಪಿ ಸಂತೋಷ ನಾಯಕ ಮೇಲಿನ ಆರೋಪಣೆಗಳು ಸಾಬೀತಾಗಿದ್ದು, 7 ವರ್ಷಗಳ ಜೈಲು ಶಿಕ್ಷೆ ಹಾಗೂ 20,000 ರೂ. ದಂಡವನ್ನು ವಿಧಿಸಿ, ದಂಡದ ಮೊತ್ತದಲ್ಲಿ 10,000 ರೂ. ಭಾದಿತಳಿಗೆ ಪರಿಹಾರ ರೂಪದಲ್ಲಿ ವಿತರಿಸಲು ಆದೇಶಿಸಲಾಗಿದೆ.

ಎರಡನೇ ಆರೋಪಿ ಅಮರೇಶ ನಾಯಕನಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ಹಾಗೂ ಮೂರನೇ ಆರೋಪಿ ಲಕ್ಷ್ಮೀ ನಾಯಕ ಇವರಿಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...