ಮಡಿಕೇರಿ: ತಾಲ್ಲೂಕು ವ್ಯಾಪ್ತಿಯಲ್ಲಿ ಹೋಬಳಿವಾರು ಪೌತಿ/ ವಾರಸುದಾರಿಕೆಯ ಖಾತೆ ಆಂದೋಲನವು ತಾಲ್ಲೂಕಿನ ವಿವಿಧ ದಿನದಂದು ವಿವಿಧ ಕಡೆಗಳಲ್ಲಿ ನಡೆಯಲಿದೆ.
ಜುಲೈ 4 ರಂದು ಭಾಗಮಂಡಲ, ಜು. 7 ರಂದು ನಾಪೋಕ್ಲು, ಜು.11 ರಂದು ಸಂಪಾಜೆ ಮತ್ತು ಜು.14 ರಂದು ಮಡಿಕೇರಿಯಲ್ಲಿ ಪೌತಿ ಖಾತೆ ಆಂದೋಲನ ನಡೆಯಲಿದೆ.
ಪೌತಿ ಖಾತೆ ವರ್ಗಾವಣೆ ಮಾಡಲು ನೀಡಬೇಕಾದ ದಾಖಲೆಗಳು:
ಖಾತೆದಾರರ ಮರಣ ದೃಢೀಕರಣ ಪತ್ರ, ಮರಣ ದೃಡೀಕರಣ ಪತ್ರ ಲಭ್ಯ ಇಲ್ಲದಿದ್ದಲ್ಲಿ ಆಧಾರ್ ಮತ್ತು ಪಡಿತರ ಚೀಟಿ ದಾಖಲೆಯನ್ನು ಸಂಬಂಧಪಟ್ಟ ವಾರಸುದಾರರಿಂದ ಅಫಿಡವಿಟ್ ಪಡೆದುಕೊಳ್ಳುವುದು, ವಂಶವೃಕ್ಷ ದೃಢೀಕರಣ ಪತ್ರ, ಚಾಲ್ತಿ ಸಾಲಿನ ಪಹಣಿ ಹಾಗೆಯೇ ಚಾಲ್ತಿ ಸಾಲಿನ ಪಹಣೆ ಕಾಲಂ 10 ರಲ್ಲಿ ದಾಖಲಿರುವ ಮ್ಯೂಟೇಷನ್ ಪ್ರತಿ/ ಜಮಾಬಂದಿ ಹಾಗೂ ಆಧಾರ್ ಪ್ರತಿ ಮತ್ತು ದೂರವಾಣಿ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ತಹಶೀಲ್ದಾರ್ ಪಿ.ಎಸ್.ಮಹೇಶ್ ಅವರು ತಿಳಿಸಿದ್ದಾರೆ.
ಪೌತಿ ವಾರಸುದಾರಿಕೆಯ ಖಾತೆ ಸಂಬಂಧ ದಾಖಲಾತಿಗಳೊಂದಿಗೆ(ಪಟ್ಟೆದಾರರು ಮರಣ ಹೊಂದಿದ್ದರೆ ಪಟ್ಟೆದಾರರ ನೇರ ವಾರಸುದಾರರಲ್ಲದೇ ಇತರೆ ಸಂಬಂಧಿಗಳಿಗೆ ನೇರ ಖಾತೆ ಮಾಡುವ ಪ್ರಕ್ರಿಯೆ ಹೊರತು ಪಡಿಸಿ) ನಮೂನೆ-1 ರಲ್ಲಿ ಮನವಿ ಸಲ್ಲಿಸಬಹುದು.