ಮೇಷ ರಾಶಿ
ಶಾರೀರಿಕ ಮಾನಸಿಕ ಅಸ್ವಸ್ಥತೆಯ ಅನುಭವವಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ. ಉದರ ಸಂಬಂಧಿ ಸಮಸ್ಯೆಗಳು ಕಾಡಲಿವೆ. ಪ್ರವಾಸಕ್ಕೆ ವಿಘ್ನ ಎದುರಾಗಲಿದೆ.
ವೃಷಭ ರಾಶಿ
ತಂದೆಯಿಂದ ವಿಶೇಷ ಲಾಭವಾಗಲಿದೆ. ಸರ್ಕಾರದ ಜೊತೆಗಿನ ಆರ್ಥಿಕ ವ್ಯವಹಾರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಒಳ್ಳೆ ಫಲಿತಾಂಶ ಸಿಗುತ್ತದೆ.
ಮಿಥುನ ರಾಶಿ
ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶುಭ ದಿನ. ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರದಿಂದ ತಕ್ಕ ಪ್ರತಿಫಲ ದೊರೆಯುತ್ತದೆ. ಭಾಗ್ಯವೃದ್ಧಿ ಯೋಗವಿದೆ.
ಕರ್ಕ ರಾಶಿ
ಕುಟುಂಬ ಸದಸ್ಯರೊಂದಿಗೆ ಜಗಳವಾಗಬಹುದು. ಕೆಲಸದ ವಿಷಯದಲ್ಲಿ ಸಂತೋಷವಾಗಿರುತ್ತೀರಿ. ಅಧಿಕ ಹಣ ಖರ್ಚಾಗಲಿದೆ. ಅನೈತಿಕ ಕಾರ್ಯಗಳಿಂದ ದೂರವಿರಿ.
ಸಿಂಹ ರಾಶಿ
ತಂದೆ ಮತ್ತು ಹಿರಿಯರ ಸಹಕಾರ ದೊರೆಯಲಿದೆ. ಸಾಮಾಜಿಕ ಪ್ರತಿಷ್ಠೆ ವೃದ್ಧಿಸಲಿದೆ. ಕೋಪ ಮತ್ತು ವ್ಯಗ್ರತೆ ಹೆಚ್ಚಾಗಲಿದೆ. ಅದನ್ನು ನಿಯಂತ್ರಿಸಿಕೊಳ್ಳಿ. ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.
ಕನ್ಯಾ ರಾಶಿ
ಇಂದು ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಬಗ್ಗೆ ಚಿಂತೆ ಕಾಡುತ್ತದೆ. ಅತಿಯಾದ ಉತ್ಸಾಹದಿಂದ ಕೆಲಸ ಬಿಗಡಾಯಿಸಬಹುದು. ಕುಟುಂಬಸ್ಥರು ಮತ್ತು ಮಿತ್ರರೊಂದಿಗೆ ಭಿನ್ನಾಭಿಪ್ರಾಯ ಮೂಡಲಿದೆ.
ತುಲಾ ರಾಶಿ
ಆದಾಯ ವೃದ್ಧಿಸಲಿದೆ. ಕಚೇರಿ ಮತ್ತು ವ್ಯವಹಾರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಪದೋನ್ನತಿ ದೊರೆಯುವ ಸಾಧ್ಯತೆ ಇದೆ. ವೈವಾಹಿಕ ಸುಖ ಪ್ರಾಪ್ತಿಯಾಗಲಿದೆ.
ವೃಶ್ಚಿಕ ರಾಶಿ
ಗೃಹಸ್ಥ ಜೀವನದಲ್ಲಿ ಸಂತೋಷದ ಅನುಭವವಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ದೊರೆಯಲಿದೆ. ಬಾಕಿ ವಸೂಲಿಯಾಗಲಿದೆ.
ಧನು ರಾಶಿ
ಆರೋಗ್ಯ ಏರುಪೇರಾಗಬಹುದು. ಚಿಂತೆಯಿಂದಾಗಿ ಮನಸ್ಸು ಮತ್ತಷ್ಟು ವ್ಯಾಕುಲಗೊಳ್ಳುತ್ತದೆ. ಪ್ರವಾಸ ಅಥವಾ ಯಾತ್ರೆಯನ್ನು ಸ್ಥಗಿತಗೊಳಿಸುವುದು ಉತ್ತಮ. ಅದೃಷ್ಟ ನಿಮ್ಮ ಜೊತೆಗಿರುವುದಿಲ್ಲ.
ಮಕರ ರಾಶಿ
ಆಕಸ್ಮಿಕವಾಗಿ ಹಣ ಖರ್ಚಾಗುತ್ತದೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಕೋಪವನ್ನು ನಿಯಂತ್ರಿಸಿಕೊಳ್ಳಿ. ಕಚೇರಿಯಲ್ಲಿ ನಿಮ್ಮ ಬುದ್ಧಿವಂತಿಕೆ ಪ್ರಶಂಸೆಗೆ ಪಾತ್ರವಾಗಲಿದೆ.
ಕುಂಭ ರಾಶಿ
ಉತ್ತಮ ವಸ್ತ್ರ, ಆಭರಣ ಮತ್ತು ವಾಹನ ಪ್ರಾಪ್ತಿಯಾಗಲಿದೆ. ಸಾರ್ವಜನಿಕ ಬದುಕಿನಲ್ಲಿ ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ದೃಢ ಆತ್ಮವಿಶ್ವಾಸದಿಂದಾಗಿ ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ.
ಮೀನ ರಾಶಿ
ದೈನಿಕ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸ್ವಭಾವದಲ್ಲಿ ಉಗ್ರತೆ ಹೆಚ್ಚಾಗಬಹುದು. ಹಾಗಾಗಿ ಮಾತು ಮತ್ತು ವ್ಯವಹಾರದಲ್ಲಿ ಸಮಾಧಾನವಿರಲಿ.