ರಕ್ಷಣಾ ಸಚಿವಾಲಯ ಭಾರತೀಯ ಸೇನೆ ಮತ್ತು ನೌಕಾಪಡೆಯು ಅಗ್ನಿಪಥ್ ಯೋಜನೆಯಡಿಯಲ್ಲಿ ಅಗ್ನಿವೀರ್ ಗಳ ನೇಮಕಾತಿಗಾಗಿ ನೋಂದಣಿಯನ್ನು ಪ್ರಾರಂಭಿಸಿದೆ ಎಂದು ಪ್ರಕಟಿಸಿದೆ.
ಯೋಜನೆಯಡಿಯಲ್ಲಿ, ಅಗ್ನಿವೀರ್ ಗಳನ್ನು 4 ವರ್ಷಗಳವರೆಗೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ನಾಲ್ಕು ವರ್ಷಗಳ ನಂತರ, ಅರ್ಹತೆ, ಇಚ್ಛೆ ಮತ್ತು ವೈದ್ಯಕೀಯ ಫಿಟ್ ನೆಸ್ ಆಧಾರದ ಮೇಲೆ ಅವರಲ್ಲಿ ಶೇ. 25 ರಷ್ಟು ಮಂದಿಯನ್ನು ಉಳಿಸಿಕೊಳ್ಳಬಹುದು ಅಥವಾ ನಿಯಮಿತ ಕೇಡರ್ ನಲ್ಲಿ ಮರು-ಸೇರ್ಪಡೆಗೊಳಿಸಬಹುದು.
ಉಳಿದ 75 ಪ್ರತಿಶತದಷ್ಟು ಜನರು 11-12 ಲಕ್ಷ ರೂಪಾಯಿಗಳ ‘ಸೇವಾ ನಿಧಿ’ ಪ್ಯಾಕೇಜ್ ಗಳಿಗೆ ಅರ್ಹರಾಗಿರುತ್ತಾರೆ.
ಅವರ ಎರಡನೇ ವೃತ್ತಿಜೀವನಕ್ಕಾಗಿ ಅವರಿಗೆ ಕೌಶಲ್ಯ ಪ್ರಮಾಣಪತ್ರಗಳು ಮತ್ತು ಬ್ಯಾಂಕ್ ಸಾಲಗಳನ್ನು ಸಹ ಒದಗಿಸಲಾಗುತ್ತದೆ.
ನೇಮಕಾತಿಯು 90 ದಿನಗಳಲ್ಲಿ ಪ್ರಾರಂಭವಾಗಲಿದೆ. ಫಲಾನುಭವಿಗಳು ಪ್ರಶಸ್ತಿಗಳು, ಪದಕಗಳು ಮತ್ತು ವಿಮೆಗೆ ಅರ್ಹರಾಗಿರುತ್ತಾರೆ. ಮೊದಲ ನಾಲ್ಕು ವರ್ಷಗಳಲ್ಲಿ ಸೈನಿಕರಿಗೆ ಮಾಸಿಕ ಸುಮಾರು 30 ರಿಂದ 40 ಸಾವಿರ ರೂಪಾಯಿ ವೇತನ ನೀಡಲಾಗುವುದು.