ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ.ದಾನದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಆದ್ರೆ ಎಲ್ಲ ವಸ್ತುಗಳನ್ನು ದಾನ ಮಾಡುವುದು ಶುಭವಲ್ಲ. ಕೆಲ ವಸ್ತುಗಳನ್ನು ದಾನ ಮಾಡಿದ್ರೆ ಲಾಭಕ್ಕಿಂತ ನಷ್ಟ ಹೆಚ್ಚು.
ಯಾವುದೇ ಸುಮಂಗಲಿ ಮಹಿಳೆಗೆ ಸಿಂಧೂರವನ್ನು ಇನ್ನೊಬ್ಬ ಮಹಿಳೆ ಮಾಡಬಾರದು. ಸುಮಂಗಲಿ ಮಹಿಳೆ ಸಿಂಧೂರವನ್ನು ದಾನ ಮಾಡಿದ್ರೆ ಪತಿಗೆ ಪ್ರೀತಿ ಕಡಿಮೆಯಾಗುತ್ತದೆ.
ಪೊರಕೆಯನ್ನು ಎಂದೂ ದಾನದ ರೂಪದಲ್ಲಿ ನೀಡಬಾರದು. ಪೊರಕೆ ತಾಯಿ ಲಕ್ಷ್ಮಿ ಸಂಕೇತ. ಪೊರಕೆ ದಾನ ಮಾಡಿದ್ರೆ ಮನೆಗೆ ಬರಬೇಕಿದ್ದ ಲಕ್ಷ್ಮಿ ವಾಪಸ್ ಹೋಗ್ತಾಳೆ.
ಹಾಳಾದ ಅಥವಾ ಬಳಸಿದ ಎಣ್ಣೆಯನ್ನು ದಾನ ಮಾಡಬಾರದು. ಶುದ್ಧ ಎಣ್ಣೆಯ ದಾನ ಮಾಡುವುದ್ರಿಂದ ಶನಿದೇವನ ಕೃಪೆಗೆ ಪಾತ್ರರಾಗಬಹುದು. ಆದ್ರೆ ಬಳಸಿದ, ಹಾಳಾದ ಎಣ್ಣೆ ದಾನ ಮಾಡಿದ್ರೆ ಶನಿ ಕೋಪಗೊಳ್ತಾನೆ.
ಪುಸ್ತಕ ದಾನದಿಂದ ಬುದ್ದಿ ಹೆಚ್ಚಾಗುತ್ತದೆ. ಆದ್ರೆ ಹರಿದ ಪುಸ್ತಕ ದಾನ ಮಾಡುವುದ್ರಿಂದ ಕಲಿಕೆಗೆ ಅಡ್ಡಿಯುಂಟಾಗುತ್ತದೆ.
ಉಕ್ಕಿನ ಪಾತ್ರೆಗಳನ್ನು ದಾನ ಮಾಡುವುದರಿಂದ ಮನೆಯ ಶಾಂತಿ ಮತ್ತು ನೆಮ್ಮದಿ ಹಾಳಾಗುತ್ತದೆ. ಈ ಕಾರಣಕ್ಕಾಗಿ ಎಂದಿಗೂ ಉಕ್ಕಿನ ಪಾತ್ರೆಗಳನ್ನು ದಾನ ನೀಡಬಾರದು.