ರಾಜಸ್ತಾನದ ಉದಯ್ಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯಾ ಲಾಲ್ನ ಶಿರಚ್ಛೇದ ಮಾಡಿದ ಇಸ್ಲಾಂ ಉಗ್ರರಿಗೂ, 26/11 ಮುಂಬೈ ಭಯೋತ್ಪಾದಕ ದಾಳಿಗೂ ಸಂಬಂಧ ಇದೆ ಎಂಬ ಬಗ್ಗೆ ಆಘಾತಕಾರಿ ವಿವರಗಳು ಬಹಿರಂಗವಾಗಿವೆ.
ಜೂನ್ 28 ರಂದು ಉದಯ್ಪುರದಲ್ಲಿ ಕನ್ಹಯ್ಯಾ ಲಾಲ್ನನ್ನು ಕೊಂದ ಬಳಿಕ ಹಂತಕ ಮೊಹಮ್ಮದ್ ರಿಯಾಜ್ ಅಖ್ತರ್ ಮತ್ತು ಮೊಹಮ್ಮದ್ ಗೌಸ್ ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ಹಂತಕರು 2611 ನಂಬರ್ ಪ್ಲೇಟ್ ಹೊಂದಿರುವ ಬೈಕ್ ಅನ್ನೇ ಬಳಸಿರೋದು ಪತ್ತೆಯಾಗಿದೆ.
2008ರ 26-11ರಂದು ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. 2611 ಅನ್ನೋದು ಪಾಕಿಸ್ತಾನಿ ದಿನವನ್ನು ಸೂಚಿಸುತ್ತದೆ. ಅದೇ ನಂಬರ್ ಪ್ಲೇಟ್ ಹೊಂದಿರೋ ಬೈಕ್ ಕೂಡ ಬಳಸಿದ್ದಾರೆ ಅಂದರೆ ಈ ಪೈಶಾಚಿಕ ಕೃತ್ಯ ಎಸಗಿದರವ ಮನಸ್ಥಿತಿ ಹೇಗಿತ್ತು ಅನ್ನೋದನ್ನು ಊಹಿಸಬಹುದು.
ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ಹಂತಕರಲ್ಲಿ ಓರ್ವ ಪಾಕ್ ಮೂಲದ ಉಗ್ರಗಾಮಿ ಗುಂಪು ದಾವತ್-ಎ-ಇಸ್ಲಾಮಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಕೆಲವು ತಿಂಗಳುಗಳ ಕಾಲ ಈತ ಪಾಕಿಸ್ತಾನದಲ್ಲೇ ತಂಗಿದ್ದ. ಹಾಗಾಗಿ ಉದಯ್ಪುರದಲ್ಲಿ ನಡೆದ ಹತ್ಯೆಯ ಹಿಂದೆ ಪಾಕಿಸ್ತಾನದ ಕೈವಾಡವಿರುವ ಶಂಕೆ ಮೂಡಿದೆ. ಹಂತಕರನ್ನು ಪೊಲೀಸರು 170 ಕಿಮೀ ದೂರದಲ್ಲಿ ಭೀಮ್ ಹೆದ್ದಾರಿ ಬಳಿ ಯುಡಿಪುರದಿಂದ ಬಂಧಿಸಿದ್ದಾರೆ.
ವರದಿಗಳ ಪ್ರಕಾರ ಹಂತಕರಲ್ಲಿ ಒಬ್ಬನಾದ ಮೊಹಮ್ಮದ್ ರಿಯಾಜ್ 26/11 ದಿನಾಂಕದ ಬಗ್ಗೆ ಗೀಳು ಹೊಂದಿದ್ದ. ಇದೇ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಖರೀದಿಸಲು 5,000 ರೂಪಾಯಿ ಖರ್ಚು ಮಾಡಿದ್ದ. ಹಂತಕರು ಕನ್ಹಯ್ಯಾ ಲಾಲ್ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ತಮ್ಮ ಬೈಕ್ ಅನ್ನು ಸ್ಟಾರ್ಟ್ ಮೋಡ್ನಲ್ಲಿ ಇಟ್ಟುಕೊಂಡಿದ್ದರು. ಸಿಕ್ಕಿಬೀಳದೆ ಸ್ಥಳದಿಂದ ಪರಾರಿಯಾಗಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು.
ಕನ್ಹಯ್ಯನನ್ನು ಕೊಂದು ಬೈಕ್ನಲ್ಲಿ ಎಸ್ಕೇಪ್ ಆದ ಇಬ್ಬರೂ ಮತ್ತೊಂದು ವೀಡಿಯೊವನ್ನು ಚಿತ್ರೀಕರಿಸಲು ಅಜ್ಮೀರ್ ಕಡೆಗೆ ತೆರಳಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ರಾಜಸ್ಥಾನದ ಪೊಲೀಸರು, ಉದಯಪುರದಿಂದ ಹಂತಕರು ತಪ್ಪಿಸಿಕೊಳ್ಳದಂತೆ ತಡೆಯಲು ಗಡಿಗಳನ್ನು ಬಂದ್ ಮಾಡಿಸಿದ್ರು. ಬೀದಿ ಬೀದಿಗಳಲ್ಲೂ ಹಂತಕರಿಗಾಗಿ ಬಲೆ ಬೀಸಿದ್ರು. ದಿಯೋಗರ್ ಬಳಿಯೇ ಹಂತಕರಿದ್ದಾರೆ ಎಂಬ ಸುಳಿವು ಸಿಕ್ಕಿದ್ದೇ ತಡ ಅವರ ಬೆನ್ನಟ್ಟಿ ಹೆಡೆಮುರಿ ಕಟ್ಟಿದ್ದಾರೆ.