alex Certify ಬೆರಗಾಗಿಸುವಂತಿದೆ ಗೋಡೆ ಮೇಲೆ ʼಬೆರಣಿʼ ತಟ್ಟುವ ಮಹಿಳೆಯ ಕೌಶಲ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುವಂತಿದೆ ಗೋಡೆ ಮೇಲೆ ʼಬೆರಣಿʼ ತಟ್ಟುವ ಮಹಿಳೆಯ ಕೌಶಲ್ಯ

ಗ್ರಾಮೀಣ ಭಾಗದಲ್ಲಿ ಇಂದಿಗೂ ಸಗಣಿ ಬೆರಣಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಬೆರಣಿ ತಟ್ಟುವುದೂ ಸಹ ಒಂದು ಕೌಶಲವೇ. ಈ ಕೆಲಸ ಮಾಡುವ ಅನೇಕ ಮಹಿಳೆಯರು ತಮ್ಮ ಕೌಶಲ್ಯಕ್ಕಾಗಿ ಮೆಚ್ಚುಗೆ ಪಡೆಯುವುದಿಲ್ಲ. ಆದರೆ, ಇತ್ತೀಚೆಗಷ್ಟೇ ಐಎಎಸ್​ ಅಧಿಕಾರಿಯೊಬ್ಬರು ಮಾಡಿರುವ ಟ್ವಿಟ್​ ಅಂತಹ ಕೌಶಲ್ಯವನ್ನು ತೋರಿಸುತ್ತದೆ. ಮತ್ತು ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.

ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಅವರು ಮಹಿಳೆಯೊಬ್ಬರು ಹಸುವಿನ ಸಗಣಿಯನ್ನು ಒಣಗಿಸಲು ಬೆರಣಿ ತಟ್ಟಿ ಗೋಡೆಯ ಮೇಲೆ ಎಸೆಯುವ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಆಕೆಯ ಎಸೆತ ಎಷ್ಟು ನಿಖರವೆಂದರೆ, ನೇರವಾಗಿ ಗುರಿ ಇಟ್ಟ ಕಡೆ ನಿರ್ದಿಷ್ಟ ಸ್ಥಳದಲ್ಲಿ ಗೋಡೆ ಮೇಲೆ ಅಂಟಿಕೊಳ್ಳುತ್ತದೆ.

ಈ 15-ಸೆಕೆಂಡ್​ ಕ್ಲಿಪ್​ ಶೇರ್​ ಮಾಡುವಾಗ “ಭಾರತೀಯ ಬಾಸ್ಕೆಟ್​ ಬಾಲ್​ ತಂಡವು ಆಕೆಯನ್ನು ಹುಡುಕುತ್ತಿದೆ’ ಎಂದು ಶೀರ್ಷಿಕೆ ಬರೆದಿದ್ದಾರೆ. ಈ ವಿಡಿಯೋ ಒಂದು ದಿನದಲ್ಲಿ 1.1 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿತು ಮತ್ತು 38,000ಕ್ಕೂ ಹೆಚ್ಚು ಲೈಕ್​ ಪಡೆಯಿತು. ಮಹಿಳೆಯ ಕೌಶಲ್ಯ ಅನೇಕ ನೆಟ್ಟಿಗರನ್ನು ಆಶ್ಚರ್ಯಚಕಿತಗೊಳಿಸಿದೆ. ಆದರೆ, ಕೆಲವರು ಶರಣ್​ ಟ್ವೀಟ್​ ಅನ್ನು ಟೀಕಿಸಿ ಬಡತನವನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...