ಅಮೆರಿಕಾದ ಓಹಿಯೋದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ವಿಸ್ಲಿಂಗ್ ಸ್ಕ್ರೋಟಮ್ ಎಂಬ ವಿಚಿತ್ರ ಸಿಂಡ್ರೋಮ್ ಅನ್ನು ಹೊಂದಿದ್ದಾರೆ. ಇದನ್ನು ಹೊಂದಿರುವ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಇದು ನ್ಯೂಮೋಸ್ಕ್ರೋಟಮ್ ಎಂಬ ಅಪರೂಪದ ಸ್ಥಿತಿಯಿಂದ ಉಂಟಾಗುತ್ತದೆ. ಇದರಲ್ಲಿ ದೇಹದಲ್ಲಿ ಹೆಚ್ಚುವರಿ ಗಾಳಿಯು ವೃಷಣಗಳ ಮೇಲೆ ತೆರೆದ ಗಾಯದ ಮೂಲಕ ಹೊರಬರುತ್ತದೆ.
ಅಪರಿಚಿತ ವ್ಯಕ್ತಿ ಉಸಿರಾಟದ ತೊಂದರೆಯೊಂದಿಗೆ ತನ್ನ ಖಾಸಗಿ ಭಾಗದಿಂದ ಹಿಸ್ಸಿಂಗ್ ಶಬ್ಧದಿಂದ ಹೊರಬರುವ ಬಗ್ಗೆ ವೈದ್ಯರಲ್ಲಿ ಹೇಳಿಕೊಂಡಿದ್ದಾನೆ. ಕೂಡಲೇ ಆತನನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯಲಾಯಿತು. ಅವನ ಎದೆಯನ್ನು ಎಕ್ಸ್-ರೇ ಮಾಡಿದಾಗ, ಗಾಳಿಯ ಅತಿಯಾದ ಪರಿಣಾಮದ ಕಾರಣದಿಂದಾಗಿ ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡವುಂಟಾಗಿದೆ. ವೈದ್ಯರ ಪ್ರಕಾರ, ಇದನ್ನು ಪರಿಶೀಲಿಸದೆ ಹೋಗಿದ್ದರೆ, ಅದು ಅವನ ಹೃದಯ ಮತ್ತು ಶ್ವಾಸಕೋಶದ ಕಾರ್ಯನಿರ್ವಹಣೆಯ ಸಾಮರ್ಥ್ಯವನ್ನು ಶಾಶ್ವತವಾಗಿ ಹಾನಿಗೊಳಿಸಬಹುದಿತ್ತು.
SHOCKING NEWS: ರೇಬಿಸ್ ಕಾಯಿಲೆಗೆ ತುತ್ತಾಗಿದ್ದ ಕಾಲೇಜು ವಿದ್ಯಾರ್ಥಿನಿ ಸಾವು
ಇನ್ನು ಹಿಸ್ಸಿಂಗ್ ಶಬ್ಧವು ಪ್ರಾಥಮಿಕವಾಗಿ ಎಡ ಸ್ಕ್ರೋಟಮ್ ಮೇಲೆ ತೆರೆದ ಗಾಯದಿಂದ ಬರುತ್ತಿದೆ ಎಂದು ತಿಳಿದು ಬಂದಿದೆ. ಊತವನ್ನು ಕಡಿಮೆ ಮಾಡಲು ಐದು ತಿಂಗಳ ಹಿಂದೆ ವೃಷಣಗಳ ಬಳಿ ಇದ್ದ ಗಾಯದಿಂದಾಗಿ ಈ ರೀತಿ ಶಬ್ಧ ಬರಲು ಕಾರಣವಾಗಿದೆ.
ಇನ್ನು ಈ ವ್ಯಕ್ತಿಯನ್ನು ಹೆಚ್ಚುವರಿ ಆರೈಕೆಗಾಗಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆತನ ಆರೋಗ್ಯವು ಹದಗೆಡುತ್ತಾ ಹೋದಂತೆ, ಹೆಚ್ಚಿನ ಗಾಳಿಯು ಅವರ ಶ್ವಾಸಕೋಶ ಮತ್ತು ಎದೆಯ ಗೋಡೆಯ ನಡುವೆ ಸಿಲುಕಿಕೊಂಡಿತು.
ಆಸ್ಪತ್ರೆಯಲ್ಲಿ ಮೂರು ದಿನಗಳ ಚಿಕಿತ್ಸೆ ನಂತರ ವ್ಯಕ್ತಿಯು ಚೇತರಿಸಿಕೊಂಡಿದ್ದಾನೆ.