ನವದೆಹಲಿ: ರೆಪೋ ದರ ಏರಿಕೆ ಹಿನ್ನಲೆಯಲ್ಲಿ ಜುಲೈ 1 ರಂದು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ.
ಸಣ್ಣ ಉಳಿತಾಯ ಬಡ್ಡಿದರ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ನಿರಾಸೆ ಮೂಡಿಸಿದೆ. ಹಣದುಬ್ಬರ ಹೆಚ್ಚಾಗಿ, ರೆಪೋ ದರ ಏರಿಕೆಯಾಗುತ್ತಿದ್ದರೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ.
2020 -21ರ ಮೊದಲ ತ್ರೈಮಾಸಿಕದಿಂದಲೂ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರ ಪರಿಷ್ಕರಣೆ ಮಾಡಿಲ್ಲ. ಪಿಪಿಎಫ್, ಎನ್.ಎಸ್.ಸಿ., ಸುಕನ್ಯಾ ಸಮೃದ್ಧಿ ಯೋಜನೆ ಮೊದಲಾದ ಸಣ್ಣ ಉಳಿತಾಯ ಯೋಜನೆಗಳಲ್ಲಿ ತೊಡಗಿಸುವ ಉಳಿತಾಯಕ್ಕೆ ಬಡ್ಡಿದರ ಹೆಚ್ಚಳ ಮಾಡಿಲ್ಲ.
ಪಿಪಿಎಫ್ ಗೆ ಶೇ. 7.1 ರಷ್ಟು, ಎನ್.ಎಸ್.ಸಿ.ಗೆ ಶೇ. 6.8 ರಷ್ಟು, ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ. 7.6 ರಷ್ಟು ಬಡ್ಡಿದರ ಸಿಗುತ್ತಿದೆ.