ಬೆಂಗಳೂರು: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. 10 ಗ್ರಾಂ ಚಿನ್ನದ ದರ 980 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 600 ರೂ. ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ದರ 47,650 ರೂಪಾಯಿ ಇದ್ದು, ದರ ಇಳಿಕೆ ನಂತರ 46,750 ರೂ.ಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ದರ 51,980 ರೂಪಾಯಿ ಇದ್ದು, ದರ ಇಳಿಕೆಯ ನಂತರ 51,000 ರೂ. ಆಗಿದೆ. ಬೆಳ್ಳಿ ದರ ಕೆಜಿಗೆ 600 ಕಡಿಮೆಯಾಗಿ 60,000 ರೂ.ನಿಂದ 59, 400 ರೂ.ಗೆ ಇಳಿಕೆಯಾಗಿದೆ.