ಐಶಾರಾಮಿ ಬಂಗಲೆ, ಕೈ ತುಂಬಾ ಹಣ, ಮನೆಕೆಲಸಕ್ಕೆ ಆಳುಕಾಳುಗಳು, ಓಡಾಡೋಕೆ ಹೈ-ಫೈ ಕಾರು ಹೀಗೆ ಎಲ್ಲ ಇದ್ದೂ, ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಹೇಗೆ ಅಲ್ವಾ.. ಉತ್ತರ ಪ್ರದೇಶದಲ್ಲಿರುವ ಓರ್ವ ವೃದ್ಧೆಗೂ ಇದೇ ಸಮಸ್ಯೆ ಕಾಡ್ತಿತ್ತು. ಅದಕ್ಕೆ ಆಕೆ ಕೊನೆಗೆ ಪರಿಹಾರವಾಗಿ ಕಂಡುಕೊಂಡಿದ್ದು ಆತ್ಮಹತ್ಯೆಯಲ್ಲಿ.
ಅದು 13 ಅಂತಸ್ತಿನ ಅಪಾರ್ಟಮೆಂಟ್. ಅಲ್ಲಿನ ಬಾಲ್ಕನಿಯಿಂದ ಹಾರಿ 83 ವರ್ಷ ವಯಸ್ಸಿನ ಉಮಾ ಶುಕ್ಲಾ ಅನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೆಲವು ದಿನಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಅನ್ನೋ ಮಾಹಿತಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೊಟ್ಟಿದ್ದಾರೆ.
ಉಮಾ ಅವರು ಕೆಲ ದಿನಗಳ ಹಿಂದೆ ಇಂದಿರಾಪುರದಲ್ಲಿ ಇರುವ ಜಯಪುರಿಯಾ ಸನ್‌ರೈಸರ್ಸ್ ಸೊಸೈಟಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು. ಅದು 13ನೇ ಫ್ಲೋರ್ ಮೇಲಿರುವ ಮನೆಯಾಗಿದೆ. ಮನೆಯ ಸದಸ್ಯರು ಹೊರಗೆ ಹೋದ ಸಮಯದಲ್ಲಿ ಬಾಲ್ಕನಿಗೆ ಹೋಗಿ ಅಲ್ಲಿರುವ ಗಿಡಗಳ ಹೂ ಕುಂಡದ ಮೇಲೆ ಕಾಲಿಟ್ಟು, ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವವನ್ನ ಪೋಸ್ಟ್‌ಮಾರ್ಟ್‌ಮ್‌ಗೆ ಕಳುಹಿಸಲಾಗಿದೆ. ಪೊಲೀಸರು ಮುಂದಿನ ತನಿಖೆಯನ್ನ ಮಾಡುತ್ತಿದ್ದಾರೆ.
ಈ ಘಟನೆಯಿಂದ ಸೊಸೈಟಿಯಲ್ಲಿ ಕೆಲ ಸಮಯದವರೆಗೆ ಆತಂಕ ನೆಲೆಸಿತ್ತು. ಈ ಆತ್ಮಹತ್ಯೆಯ ಸುತ್ತ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ. ಈಗಾಗಲೇ ಮಾಡಿರುವ ತನಿಖೆಯಿಂದ ಪೊಲೀಸರು ಗಮನಕ್ಕೆ ಬಂದ ವಿಚಾರ, ಉಮಾ ಅವರು ಅನೇಕ ದಿನಗಳಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಅದಕ್ಕಾಗಿ ಅವರು ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು ಅಂತ ಕೂಡಾ ಹೇಳಲಾಗುತ್ತಿದೆ.