alex Certify ಸಕ್ಕರೆಯಲ್ಲ……..ಚಿನ್ನದ ಸರವನ್ನೇ ಹೊತ್ತೊಯ್ದಿವೆ ಈ ಇರುವೆಗಳು…! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಕ್ಕರೆಯಲ್ಲ……..ಚಿನ್ನದ ಸರವನ್ನೇ ಹೊತ್ತೊಯ್ದಿವೆ ಈ ಇರುವೆಗಳು…! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್​ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಈ ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಕೆಲವೊಂದು ವಿಡಿಯೋಗಳು ಕಣ್ಣಂಚಲ್ಲಿ ನೀರು ತರುವುದೂ ಉಂಟು. ಈ ಬಾರಿ ತಮಾಷೆಯ ವಿಡಿಯೋವೊಂದು ಸೋಶಿಯಲ್​ ವಿಡಿಯಾಗಳಲ್ಲಿ ಭಾರೀ ಸದ್ದು ಮಾಡ್ತಿದೆ.

ಅನೇಕ ಇರುವೆಗಳು ಚಿನ್ನದ ಸರವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತಾ ನಂದಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಕಳ್ಳರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದು..? ಎಂದು ಸುಶಾಂತಾ ನಂದಾ ಪ್ರಶ್ನೆ ಮಾಡಿದ್ದಾರೆ.

ಈ ವಿಡಿಯೋ ಈವರೆಗೆ 70 ಸಾವಿರಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ಅನೇಕರು ಈ ವಿಡಿಯೋಗೆ ಫನ್ನಿ ಕಮೆಂಟ್​ ಕೂಡ ಮಾಡಿದ್ದಾರೆ. ಇರುವೆಗಳು ಸಿಹಿಯನ್ನು ಇಷ್ಟ ಪಡುತ್ತವೆ. ಬಹುಶಃ ಈ ಚಿನ್ನದ ಸರ ಕೂಡ ಸಿಹಿ ಇರಬೇಕು ಎಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

— Susanta Nanda (@susantananda3) June 28, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...