ಸಂದರ್ಶನಕ್ಕೆ ಹೊರಟಾಗ ಅನುಸರಿಸಿ ಈ ವಿಧಾನ 29-06-2022 7:43PM IST / No Comments / Posted In: Featured News, Live News, Astro ಓದು ಮುಗಿದ ಬಳಿಕ ಕೆಲಸಕ್ಕಾಗಿ ಅಲೆಯುವುದು ಶುರುವಾಗುತ್ತದೆ. ಒಳ್ಳೆಯ ಉದ್ಯೋಗ ಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಸಂದರ್ಶನಕ್ಕೆ ಹೋಗುವಾಗ ಈ ವಿಧಾನವನ್ನು ಅನುಸರಿಸಿದರೆ ದೇವರ ಅನುಗ್ರಹ ದೊರೆತು ಉದ್ಯೋಗ ದೊರಕುತ್ತದೆ.ಕೆಲಸದ ಸಲುವಾಗಿ ಸಂದರ್ಶನಕ್ಕೆ ಹೊರಟಾಗ ಎಲ್ಲರ ಮನದಲ್ಲೂ ಒಂದು ರೀತಿ ಭಯವಿರುತ್ತದೆ. ಈ ಕೆಲಸ ತನಗೆ ಸಿಗುತ್ತದೆಯೋ ಇಲ್ವೋ ಎಂಬ ಆತಂಕವಿರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ವಿಘ್ನನಿವಾರಕನಾದ ವಿಘ್ನೇಶ್ವರನ ಮುಂದೆ ಶ್ರದ್ಧಾ ಭಕ್ತಿಯಿಂದ ನಿಂತು ಓಂ ಗಂ ಗಣಪತಿಯೇ ನಮಃ ಎಂದು 21 ಸಲ ಪಠಿಸಿ ಇದರಿಂದ ವಿಘ್ನಗಳು ನಿವಾರಣೆಯಾಗಿ ಆ ಕೆಲಸ ನಿಮ್ಮದಾಗುತ್ತದೆ. ಜತೆಗ ಸಂದರ್ಶನವನ್ನು ಎದುರಿಸುವ ಆತ್ಮವಿಶ್ವಾಸ ನಿಮ್ಮಲ್ಲಿ ಹೆಚ್ಚುತ್ತದೆ. ಇನ್ನು ನವಧಾನ್ಯಗಳು ಕೂಡ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲು ಸಹಾಯಕವಾಗಲಿದೆ. ನವಧಾನ್ಯಗಳನ್ನು ಮಿಕ್ಸ್ ಮಾಡಿ ಇದನ್ನು ಪಕ್ಷಿಗಳಿಗೆ ಹಾಕಿದರೆ ದೇವರು ನಿಮ್ಮನ್ನು ಹರಸಿ ಉದ್ಯೋಗದ ಸಮಸ್ಯೆಯನ್ನು ನಿವಾರಿಸುತ್ತಾನೆ.