alex Certify ಜುಲೈ 1 ರಿಂದ ಜಾರಿಗೆ ಬರಲಿರುವ ಹೊಸ TDS ನಿಯಮದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 1 ರಿಂದ ಜಾರಿಗೆ ಬರಲಿರುವ ಹೊಸ TDS ನಿಯಮದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಜುಲೈ 1ರಿಂದ ಟಿಡಿಎಸ್​ಗೆ ಹೊಸ ನಿಯಮ ಬರುತ್ತಿದೆ. ಇದು ವೈದ್ಯರು ಹಾಗೂ ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಮೇಲೆ ಪರಿಣಾಮ ಬೀರಲಿದೆ. ಈ ವಿಷಯದಲ್ಲಿ ತಿಳಿದುಕೊಳ್ಳಬೇಕಾದ ಅಂಶಗಳಿವೆ.

ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ವ್ಯಾಪಾರ ಅಥವಾ ವೃತ್ತಿಯಲ್ಲಿ ಪಡೆದ ಪ್ರಯೋಜನಗಳ ಕುರಿತು ಹೊಸ ಟಿಡಿಎಸ್​ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಲಾಭವನ್ನು ನಗದು ಅಥವಾ ವಸ್ತು ಅಥವಾ ಭಾಗಶಃ ಈ ಎರಡೂ ರೂಪಗಳಲ್ಲಿರಬಹುದು ಎಂದು ಹೇಳಿದೆ.

2022- 23ರ ಬಜೆಟ್​ನಲ್ಲಿ ತೆರಿಗೆ ಆದಾಯ ಸೋರಿಕೆ ಪರಿಶೀಲಿಸಲು ಅಂತಹ ಆದಾಯದ ಮೇಲೆ ಮೂಲದಲ್ಲಿ ತೆರಿಗೆ ಕಡಿತಗೊಳಿಸುವ (ಟಿಡಿಎಸ್​) ಕ್ರಮಕೈಗೊಳ್ಳಲಾಗಿದೆ. ಇದು ಯಾವುದೇ ವ್ಯಕ್ತಿಯಿಂದ ಶೇಕಡಾ 10ರ ದರದಲ್ಲಿ ಮೂಲದಲ್ಲಿಯೇ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ.

1. ವಾರ್ಷಿಕ ರೂ. 20,000 ಮೀರಿದ ಪ್ರಯೋಜನಗಳು ಅಥವಾ ಲಾಭಗಳನ್ನು ಶೇ.10 ರ ದರದಲ್ಲಿ ತೆರಿಗೆ ಕಡಿತಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ. ವ್ಯಾಪಾರ ಅಥವಾ ಮಾರಾಟ ಪ್ರಚಾರ ಚಟುವಟಿಕೆಗಳಿಂದ ಪಡೆದ ಪ್ರಯೋಜನ ಸೋಷಿಯಲ್​ ಮೀಡಿಯಾ ​ಇನ್​ಫ್ಲುಯೆನ್ಸರ್​ ಮತ್ತು ವೈದ್ಯರಿಗೆ ಸಹ ಈ ನಿಬಂಧನೆಯನ್ನು ಅನ್ವಯಿಸಲಾಗುತ್ತದೆ.

2. ಮಾರಾಟ ಪ್ರಚಾರದ ಪ್ರಯತ್ನಗಳಿಂದ ಲಾಭ ಗಳಿಸಿದ ವ್ಯಕ್ತಿಗಳು ತಮ್ಮ ತೆರಿಗೆ ರಿಟರ್ನ್ಸ್​ನಲ್ಲಿ ತಮ್ಮ ಲಾಭ ಬಹಿರಂಗಪಡಿಸಬೇಕು. ಲಾಭ ಅಥವಾ ಉತ್ಪನ್ನದ ಮೌಲ್ಯದ ಆಧಾರದ ಮೇಲೆ ತೆರಿಗೆ ಪಾವತಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಈ ವಿಧಾನ ತರಲಾಗಿದೆ.

ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ

3. ವ್ಯಾಪಾರೋದ್ಯಮ ಉದ್ದೇಶಕ್ಕೆ ಸೋಷಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಪಡೆದ ಉಚಿತ/ಉತ್ಪನ್ನಗಳನ್ನು ತಾವೇ ಇಟ್ಟುಕೊಂಡರೆ ಟಿಡಿಎಸ್​ಗೆ ಜವಾಬ್ದಾರರಾಗಿರುತ್ತಾರೆ. ಸರಕುಗಳನ್ನು ಸಂಸ್ಥೆಗೆ ಹಿಂತಿರುಗಿಸಿದರೆ ಟಿಡಿಎಸ್​ ಅನ್ವಯಿಸುವುದಿಲ್ಲ.

4. ವೈದ್ಯರು ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುವಾಗ ಔಷಧಿಗಳ ಉಚಿತ ಮಾದರಿ ಪಡೆಯುತ್ತಿದ್ದರೆ ಆಸ್ಪತ್ರೆಯು ಈ ಮಾದರಿಗಳನ್ನು ತೆರಿಗೆಗೆ ಒಳಪಟ್ಟಂತೆ ಪರಿಗಣಿಸಲು ಮತ್ತು ಸೆಕ್ಷನ್​ 192 ರ ಪ್ರಕಾರ ತೆರಿಗೆಯನ್ನು ಕಡಿತಗೊಳಿಸಲು ಅಧಿಕಾರವನ್ನು ಹೊಂದಿದೆ.

5. ಮಾರಾಟದ ರಿಯಾಯಿತಿಗಳು, ನಗದು ರಿಯಾಯಿತಿಗಳು ಮತ್ತು ಗ್ರಾಹಕರ ರಿಯಾಯಿತಿಗಳು ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ತೆರಿಗೆ ಕಡಿತಕ್ಕೆ ಒಳಪಡುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...