ʼಅಪ್ಪʼ ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ…… ತಾನು ಎಲ್ಲ ಕಡೆ ಇರೋಕೆ ಸಾಧ್ಯವಿಲ್ಲ ಅಂತ ಗೊತ್ತಾಗಿಯೇ ಆ ದೇವರು ಅಪ್ಪ-ಅಮ್ಮನನ್ನ ಸೃಷ್ಟಿಸಿದ. ಅದರಲ್ಲೂ ಅಪ್ಪ, ಸದಾ ಮೌನಿ, ಆದರೆ ಮಕ್ಕಳಿಗಾಗಿ ಹಗಲು ರಾತ್ರಿ ಅನ್ನದೇ ದುಡಿಯೋ ಜೀವ. ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ, ಕೋಪ, ಅತಿ ಅನಿಸುವ ಶಿಸ್ತು, ಅನುಮಾನ. ಇವೆಲ್ಲದರ ಸಮ್ಮಿಲನವೇ ಅಪ್ಪ.
ಅಪ್ಪ….. ನೋಡುವುದಕ್ಕೆ ಕಟ್ಟುನಿಟ್ಟಿನ ಮನುಷ್ಯ ಅಂತ ಅನಿಸಿದರೂ ಒಳಗಡೆಯಿಂದ ಮಕ್ಕಳಿಗೆ ಏನೂ ಕಡಿಮೆ ಆಗಬಾರದು ಅನ್ನೋ ಮನಸ್ಸುಳ್ಳ ಮನಸ್ಸಿನ ಒಡೆಯ. ಅದಕ್ಕೆ ಇಡೀ ಜೀವನ ಹೊಟ್ಟೆ-ಬಟ್ಟೆ ಕಟ್ಟಿಟ್ಟು ಮಕ್ಕಳನ್ನ ಸುಖವಾಗಿ ಇಡುವುದಕ್ಕೆ ನೋಡ್ತಾನೆ. ಇನ್ನೂ ಮಕ್ಕಳ ಜೀವಕ್ಕೆ ಏನಾದ್ರೂ ಅಪಾಯ ಅಂದ್ರೆ ಸಾಕು, ತನ್ನ ಜೀವವನ್ನೇ ಒತ್ತೆಯಾಗಿಟ್ಟು ಪ್ರಾಣ ಉಳಿಸುವ ಗಟ್ಟಿ ಗುಂಡಿಗೆ ಅಪ್ಪನದ್ದು. ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಅನ್ನೋದಕ್ಕೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ.
ಈ ವಿಡಿಯೋ ನೋಡಿ ಪ್ರವಾಹದ ನೀರು ಹೇಗೆ ಉಕ್ಕಿ ಹರಿದು ಹೋಗ್ತಿದೆ ಅಂತ. ಈ ಪ್ರವಾಹದ ನೀರಿನ ಮಧ್ಯದಲ್ಲಿ ತಂದೆಯೊಬ್ಬ ತನ್ನ ಇಬ್ಬರೂ ಮಕ್ಕಳನ್ನ ಸುರಕ್ಷಿತವಾಗಿ ಒಂದು ದಡದಿಂದ ಇನ್ನೊಂದು ದಡಕ್ಕೆ ತಲುಪಿಸೋ ರೀತಿ ಹೇಗಿದೆ ನೋಡಿ. ಪ್ರವಾಹದ ನೀರು ತನ್ನನ್ನೂ ಕೊಚ್ಚಿಕೊಂಡು ಹೋಗುತ್ತೆ ಅನ್ನೋ ಸತ್ಯ ಗೊತ್ತಿದ್ದರೂ ಆತ ಧೈರ್ಯ ಕಳೆದುಕೊಂಡಿರಲಿಲ್ಲ. ಬದಲಾಗಿ ಮಕ್ಕಳನ್ನ ಇನ್ನಷ್ಟು ಬಿಗಿದಪ್ಪಿ ರಕ್ಷಣೆ ಮಾಡಿದ್ದ. ಅಲ್ಲಿಯೇ ದಡದಲ್ಲಿದ್ದ ಕೆಲವರು ಆತನಿಗೆ ಸಹಾಯ ಮಾಡಿದರು. ತಂದೆ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಕೊನೆಗೂ ತನ್ನ ಇಬ್ಬರೂ ಮಕ್ಕಳನ್ನ ಸುರಕ್ಷಿತವಾಗಿ ಸೂಪರ್ ಹೀರೋನಂತೆ ಎತ್ತಿಕೊಂಡು ದಡಕ್ಕೆ ಬಂದಿದ್ದ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಜನರು ಇದನ್ನ ನೋಡಿ ತಮ್ಮ ತಮ್ಮ ತಂದೆ ತಮಗಾಗಿ ಏನೆಲ್ಲ ಮಾಡಿದ್ದಾರೆ ಅನ್ನೋದನ್ನ ನೆನಪು ಮಾಡಿಕೊಂಡು ಭಾವುಕರಾಗುತ್ತಿದ್ಧಾರೆ. ಇಂಥಾ ಅಪ್ಪಂದಿರಿಗೆ ಹ್ಯಾಟ್ಸ್ ಆಫ್.
https://youtu.be/P51HZtfOQhU