ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಮಾತಿದೆ. ಹಾಗೆಯೇ ಜೀವನದಲ್ಲಿ ಕೆಲವು ಪ್ರಮುಖ ಪಾಠಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಬೇಕು ಇದರಿಂದ ಅವು ಸಂಪೂರ್ಣವಾಗಿ ಮಗುವಿನ ನೆನಪುಗಳಲ್ಲಿ ಉಳಿಯುತ್ತವೆ. ಇದೇ ರೀತಿ ತಾಯಿಯೊಬ್ಬಳು ತನ್ನ ಮಗಳಿಗೆ ಕಲಿಸಿರುವ ನೀತಿ ಪಾಠ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ತಾಹೇರಾ ಎಂಬ ಮಹಿಳೆ ತನ್ನ ಮಗಳಿಗೆ ಕೇವಲ ಕಾಗದದ ಹಾಳೆಯನ್ನು ಬಳಸಿ ಪಾಠವನ್ನು ಕಲಿಸಿದಳು. ವೈರಲ್ ವಿಡಿಯೊವನ್ನು ತಾಹೇರಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನ ಮೂಲದ ತಾಹೇರಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಕಿರು ವಿಡಿಯೋದಲ್ಲಿ, ಕಾಗದದ ಹಾಳೆಯನ್ನು ಬಳಸಿ ಅದಕ್ಕೆ ಅರ್ಥವಾದ ವಿಷಯಗಳನ್ನು ಹೇಳಲು ತನ್ನ ಮಗಳನ್ನು ಕೇಳಿಕೊಂಡಳು. ಪುತ್ರಿಯು ಪ್ರತಿಯೊಂದು ಕಾಮೆಂಟ್ ಗಳನ್ನು ಮಾಡಿದಾಗಲೂ ಆಕೆ ಕಾಗದವನ್ನು ಮಡಚುತ್ತಾ ಬಂದಳು. ಕೊನೆಗೆ ಕಾಗದವನ್ನು ಮೊದಲಿನಂತೆ ಬಿಡಿಸಿ, ಅದಕ್ಕೆ ಕ್ಷಮೆ ಕೇಳುವಂತೆ ಹೇಳಿದಳು.
ಬಾಲಕಿ ಕ್ಷಮೆ ಯಾಚಿಸಿದ ನಂತರವೂ ಕಾಗದವು ಸುಕ್ಕುಗಟ್ಟಿತ್ತು. ಅದಕ್ಕಾಗಿ ಹೇಳುವುದು ಸುಖಾಸುಮ್ಮನೆ ಯಾರನ್ನೂ ನೋಯಿಸಬಾರದು ಎಂದು ಅಂತಾ ತನ್ನ ಮಗಳಿಗೆ ಬುದ್ಧಿವಾದ ಹೇಳಿದಳು.
ಆನ್ಲೈನ್ನಲ್ಲಿ ಹಂಚಿಕೊಂಡ ನಂತರ ವಿಡಿಯೋ 9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್ಗಳು ತಾಹೇರಾ ಅವರ ಅದ್ಭುತ ಕಲ್ಪನೆಯನ್ನು ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್ಗಳ ವಿಭಾಗದಲ್ಲಿ ಅವರನ್ನು ಪ್ರಶಂಸಿಸಿದ್ದಾರೆ.