ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಸದ್ಯ ಇಂಗ್ಲೆಂಡ್‌ನಲ್ಲಿದ್ದಾರೆ. ಆರಾಮಾಗಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಈ ಮಧ್ಯೆ ಅರ್ಜುನ್ ತೆಂಡೂಲ್ಕರ್ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕಾರಣ ಫೋಟೋದಲ್ಲಿರೋ ಯುವತಿ.
ಮಹಿಳಾ ಕ್ರಿಕೆಟರ್ ಒಬ್ಬಳು ಸಚಿನ್ ಪುತ್ರನೊಂದಿಗೆ ಡೇಟಿಂಗ್ ಹೋಗಿರೋದು ಎಲ್ಲರ ಹುಬ್ಬೇರಿಸಿದೆ. ಆಕೆ ಬೇರೆ ಯಾರೂ ಅಲ್ಲ, ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್.
ಅರ್ಜುನ್ ತೆಂಡೂಲ್ಕರ್ ಜೊತೆಗೆ ಡಿನ್ನರ್ ಸವಿಯುತ್ತಿರುವ ಫೋಟೋವನ್ನು ಈಕೆ ಇನ್‌ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅರ್ಜುನ್ ತೆಂಡೂಲ್ಕರ್ ಹಾಗೂ ಡೇನಿಯಲ್ ವ್ಯಾಟ್ ಲಂಡನ್‌ನ ರೆಸ್ಟೋರೆಂಟ್‌ನಲ್ಲಿ ಕುಳಿತಿರೋದು ಫೋಟೋದಲ್ಲಿ ಸ್ಪಷ್ಟವಾಗಿದೆ. ಡೇನಿಯಲ್ ಮತ್ತು ಅರ್ಜುನ್ ತೆಂಡೂಲ್ಕರ್ ಬಹಳ ವರ್ಷಗಳಿಂದ್ಲೂ ಸ್ನೇಹಿತರು. ಈ ಹಿಂದೆ ಕೂಡ ಇಬ್ಬರೂ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಈ ಬಾರಿ ಲಂಡನ್‌ನ ಸೊಹೊ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಜೊತೆಯಾಗಿ ಊಟ ಸವಿದಿದ್ದಾರೆ. ಡೇನಿಯಲ್ ವ್ಯಾಟ್ ಇಂಟರ್ನೆಟ್‌ನಲ್ಲಿ ವೈರಲ್ ಆಗ್ತಿರೋದು ಇದೇ ಮೊದಲೇನಲ್ಲ. 2014 ರಲ್ಲಿ ಈಕೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿದ್ದರು.
ತನ್ನನ್ನು ಮದುವೆಯಾಗುವಂತೆ ನೇರವಾಗಿಯೇ ಪ್ರಪೋಸಲ್ ಇಟ್ಟಿದ್ದರು. ಇದು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಡೇನಿಯಲ್ ವ್ಯಾಟ್, ಒಟ್ಟು 93 ODI ಮತ್ತು 124 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಇಂಗ್ಲೆಂಡ್ ಪರ ಆಡಿದ್ದಾರೆ.