ದ್ವಿಚಕ್ರ ವಾಹನದ ಹಿಂದಿನ ಸೀಟಿನಲ್ಲಿ ಕುಳಿತು ಸವಾರಿ ಮಾಡುತ್ತಿದ್ದ ಮಹಿಳೆಯೊಬ್ಬರ ತಲೆ ಮೇಲೆ ಹಠಾತ್ತಾಗಿ ದೊಡ್ಡ ಗಾತ್ರದ ತೆಂಗಿನಕಾಯಿ ಬಿದ್ದಿದ್ದು, ಆಕೆ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಲೇಷ್ಯಾದ ಜಲನ್ ತೆಲುಕ್ ಕುಂಬಾರ್ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಶೀಘ್ರದಲ್ಲೇ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲು ವಿಡಿಯೋ ಕ್ಲಿಪ್ ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆಯು ದ್ವಿಚಕ್ರ ವಾಹನದ ಹಿಂದೆ ಇದ್ದ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಹಿಡಿಯಲ್ಪಟ್ಟಿದೆ. 28 ಸೆಕೆಂಡುಗಳ ವಿಡಿಯೋದಲ್ಲಿ, ಸವಾರನ ಹಿಂದೆ ಕುಳಿತಿದ್ದ ಮಹಿಳೆ ಬಾಸ್ಕೆಟ್ ಬಾಲ್ ಗಾತ್ರದ ತೆಂಗಿನಕಾಯಿ ತಲೆಗೆ ಬಡಿದ ನಂತರ ಬಿದ್ದು ರಸ್ತೆಯಲ್ಲಿ ಉರುಳುತ್ತಿರುವುದನ್ನು ಕಾಣಬಹುದು. ತೆಂಗಿನಕಾಯಿಯ ಬೀಳುವ ರಭಸ ಎಷ್ಟು ಪ್ರಬಲವಾಗಿತ್ತೆಂದರೆ ಅವಳ ಹೆಲ್ಮೆಟ್ ತಲೆಯಿಂದ ಹೊರಬಂದು ಉರುಳಿದೆ.
`ಅಗ್ನಿ ಪಥ್’ ಯೋಜನೆ ವಿರೋಧಿಸುವ ಮೂಲಕ ಅಚ್ಚರಿ ಮೂಡಿಸಿದ ಮೇಘಾಲಯ ರಾಜ್ಯಪಾಲ
ತೆಂಗಿನ ಕಾಯಿ ಬಿದ್ದಿದ್ದನ್ನು ಗಮನಿಸಿದ ಅಲ್ಲಿದ್ದ ಇತರ ವಾಹನ ಚಾಲಕರು ತ್ವರಿತವಾಗಿ ನೆರವಿಗೆ ಬರುವುದೂ ಸಹ ವಿಡಿಯೋದಲ್ಲಿ ಕಾಣಿಸುತ್ತದೆ. ಆಕೆ ಇನ್ನೂ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದಾರೆ. ಆದರೆ, ಘಟನೆ ನಡೆದಾಗ ಮಹಿಳೆ ಹೆಲ್ಮೆಟ್ ಧರಿಸಿರುವುದು ಆಕೆಯ ಪ್ರಾಣ ಉಳಿಸಿದೆ.