ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ ಕಳ್ಳನೊಬ್ಬ ಮರುದಿನವೇ ಅದನ್ನು ವಾಪಸ್ ಮಾಡಿರುವ ವಿಚಿತ್ರ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಘಟನೆಯ ವಿವರ: ಬಾಗಲೂರಿನ ಭರತ್ ಎಂಬವರ ಮನೆಯಲ್ಲಿ ಜೂನ್ 14ರಂದು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳುವಾಗಿತ್ತು. ಈ ಸಂಬಂಧ ಅವರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆದರೆ ಮರುದಿನವೇ ಅಂದರೆ ಜೂನ್ 15ರಂದು ಕಳುವಾಗಿದ್ದ ಚಿನ್ನಾಭರಣಗಳನ್ನು ಭರತ್ ಅವರ ಮನೆಯ ಬಳಿ ಕಳ್ಳ ಇಟ್ಟು ಹೋಗಿದ್ದಾನೆ. ಇದರಿಂದ ಭರತ್ ಕುಟುಂಬ ಸಂತಸಗೊಂಡಿದೆ.