alex Certify ಉತ್ತರಾಖಂಡದಲ್ಲಿ ಪತ್ತೆಯಾಯ್ತು ಮಾಂಸಹಾರಿ ಸಸ್ಯ: ಕೀಟಾಟುಗಳೇ ಈ ಗಿಡಗಳ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಾಖಂಡದಲ್ಲಿ ಪತ್ತೆಯಾಯ್ತು ಮಾಂಸಹಾರಿ ಸಸ್ಯ: ಕೀಟಾಟುಗಳೇ ಈ ಗಿಡಗಳ ಆಹಾರ

ದಟ್ಟಕಾನನದ ಒಳಗೆ ಒಂದಕ್ಕಿಂತ ಒಂದು ಭಯಾನಕ ರಹಸ್ಯ ಅಡಗಿವೆ. ಆಗಾಗ ಕೆಲವು ಅನಾವರಣಗೊಳ್ಳುತ್ತಿರುತ್ತೆ. ಈಗ ಅಂತಹದ್ದೇ ಒಂದು ರಹಸ್ಯ ಬಯಲಾಗಿದೆ. ಅದೇ ಈ ಗಿಡಗಳು. ಇದು ಅಂತಿಂಥ ಗಿಡಗಳಲ್ಲ. ಇವು ಮಾಂಸಹಾರಿ ಗಿಡಗಳು. ಇವು ಉತ್ತರಾಖಂಡನಲ್ಲಿ ಪತ್ತೆಯಾಗಿವೆ. ಈ ಮಾಂಸಹಾರಿ ಗಿಡಗಳ ಆಹಾರ ಏನು ಗೊತ್ತಾ ? ಕ್ರಿಮಿಗಳು, ಕೀಟಗಳು ಹಾಗೂ ಸೊಳ್ಳೆಗಳು.

ಉತ್ತರಾಖಂಡ ಕಾಡಿನಲ್ಲಿ ಅಂಕೆಶಂಕೆಗೂ ಮೀರಿದ ಚಿತ್ರ-ವಿಚಿತ್ರ ಗಿಡಗಳಿವೆ. ಇತ್ತೀಚೆಗಷ್ಟೆ ಇಲ್ಲಿ ಅಪರೂಪ ಜಾತಿಯ ಕೆಲ ಗಿಡಗಳು ಪತ್ತೆಯಾಗಿವೆ. ಈ ಗಿಡಗಳನ್ನ ಅಟ್ರಿಕುಲೇರಿಯಾ ಫರ್ಸಲಾಟಾ ಅಂತ ಹೇಳಲಾಗುತ್ತೆ. ಇಂತಹ ಗಿಡಗಳು ಚಮೋಲಿ ಜಿಲ್ಲೆಯ ಮಂಡಲಘಟ್ಟದಲ್ಲಿ ಪತ್ತೆಯಾಗಿವೆ.

BIG NEWS: ಶೇ.40 ಕಮೀಷನ್‌ ಆರೋಪ; ಪ್ರಧಾನಿ ಕಛೇರಿಯಿಂದ ದಾಖಲೆ ಸಲ್ಲಿಕೆಗೆ ಸೂಚನೆ

ಈ ಮಾಂಸಾಹಾರಿ ಗಿಡಗಳನ್ನ ಸ್ಥಳೀಯರು ಬ್ಲೇಡ್ ವರ್ಟ್ಸ ಅಂತ ಕರೆಯುತ್ತಾರೆ. ವಿಚಿತ್ರವಾಗಿರೊ ಸಂಗತಿ ಏನಂದ್ರೆ ಇಂತಹ ಗಿಡಗಳು ಕೇವಲ ಉತ್ತರಾಖಂಡನಲ್ಲಿ ಮಾತ್ರ ಅಲ್ಲ, ಹಿಮಾಲಯದ ಪಶ್ಚಿಮ ಭಾಗಗಳಲ್ಲಿಯೂ ಈ ಅಪರೂಪದ ಗಿಡಗಳನ್ನ ನೋಡಬಹುದಾಗಿದೆ.

ಡ್ರೊಸೆರಾ, ಆರ್ಟಿಕುಲೇರಿಯಾ ಮತ್ತು ಪಿಂಗುಯಿಕುಲಾ ನಂತಹ ಅಪರೂಪದ ಗಿಡಗಳು ಇತ್ತೀಚೆಗಷ್ಟೆ ಪತ್ತೆಯಾಗಿದ್ದವು. ಆ ನಂತರ ಪತ್ತೆಯಾಗಿದ್ದೇ ಈ ಅಟ್ರಿಕುಲೇರಿಯಾ ಫರ್ಸಲಾಟಾ ಗಿಡಗಳು. ಅರಣ್ಯ ಇಲಾಖೆಯವರು ಕೂಡಾ ಇದೊಂದು ಅಪರೂಪ ಜಾತಿಯ ಗಿಡಗಳು ಅಂತ ಹೇಳಿದ್ಧಾರೆ. ಈ ಗಿಡಗಳಲ್ಲಿ ಇರುವ ಕೆಮಿಕಲ್ ಅಂಶ ಕ್ರಿಮಿ, ಕೀಟಗಳನ್ನ ಜೀರ್ಣ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತೆ. ಅದೇ ರೀತಿ ಈ ಗಿಡಗಳ ಸಂರಚನೆಯಾಗಿವೆ. ಈಗ ಈ ಗಿಡಗಳು ವಿನಾಶದಂಚಿನಲ್ಲಿದ್ದು, ಈಗ ಉತ್ತರಾಖಂಡನ ದಟ್ಟ ಕಾನನದೊಳಗೆ ಪತ್ತೆಯಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...