ವಿಶ್ವದ ದುಬಾರಿ ರೆಸ್ಟೋರೆಂಟ್ ಅವ್ಯವಸ್ಥೆ ನೋಡಿ ಗ್ರಾಹಕ ಕಂಗಾಲು 28-06-2022 2:18PM IST / No Comments / Posted In: Latest News, Live News, International ಅದೊಂದು ಪ್ರಸಿದ್ಧ ರೆಸ್ಟೋರೆಂಟ್. ಅಲ್ಲಿ ಸಿಗುವ ಒಂದೊಂದು ಖಾದ್ಯ ಒಂದಕ್ಕಿಂತ ಒಂದು ರುಚಿ. ಅಷ್ಟೆ ದುಬಾರಿ. ಆದರೂ ಆ ರೆಸ್ಟೊರೆಂಟ್ನ್ನ ಹುಡುಕಿಕೊಂಡು ಗ್ರಾಹಕರು ಬಂದು, ಅಲ್ಲಿನ ವಿಶೇಷ ಖಾದ್ಯಗಳನ್ನ ತಿಂದು ಎಂಜಾಯ್ ಮಾಡ್ತಿರುತ್ತಾರೆ. ಅಷ್ಟಕ್ಕೂ ಇಲ್ಲಿ ಟೇಸ್ಟಿ ಫುಡ್ ಸಿಗುತ್ತೆ ಅನ್ನೊದಕ್ಕಿಂತ ಇದನ್ನ ಸಾಲ್ಟ್ ಬೇ ಸ್ಟೈಲ್ನಂತೆ ತಯಾರಿಸಲಾಗುತ್ತೆ ಅನ್ನೊ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಬರುತ್ತಾರೆ. ಆದರೆ ಈಗ ಅದೇ ರೆಸ್ಟೋರೆಂಟ್ನಲ್ಲಿ ಆದ ಎಡವಟ್ಟಿನಿಂದಾಗಿ ಈಗ ಆ ರೆಸ್ಟೋರೆಂಟ್ ಹಾಗೂ ಸಾಲ್ಟ್ ಬೇ ಕೂಡಾ ಸುದ್ದಿಯಲ್ಲಿದ್ದಾರೆ. ಸಾಲ್ಟ್ ಬೇ ಕಲಿಯುಗದ ನಳಪಾಕ ಮಹಾರಾಜ. ಈ ಟರ್ಕಿಯ ಹೆಸರಾಂತ ಶೇಫ್ನ ಅಸಲಿ ಹೆಸರು ನುಸ್ರೆತ್ ಗೋಪ್ಚೆ, ಭಿನ್ನ ಭಿನ್ನವಾಗಿ ಅಡುಗೆ ಮಾಡುವ ಶೈಲಿ, ಅದನ್ನು ಬಡಿಸುವ ರೀತಿಗೆ 40 ವರ್ಷದ ಗೊಪ್ಚೆ ಫೇಮಸ್. ಇದೇ ಗೋಪ್ಚೆಗೆ ಸಂಬಂಧ ಪಟ್ಟ ರೆಸ್ಟೋರೆಂಟ್ಗೆ ಬಂದ ಗ್ರಾಹಕನೊಬ್ಬನಿಗೆ ಒಂದು ಕಹಿ ಅನುಭವವಾಗಿದೆ. ಅದನ್ನ ತಮ್ಮ@zabed99 ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಸಲಿಗೆ ಗೋಪ್ಚೆ ಅವರ ರೆಸ್ಟೋರೆಂಟ್ಗೆ ಬಂದ ಗ್ರಾಹಕ ಅಲ್ಲಿ ಸಿಗುವ ವಿಶೇಷ ಕಬಾಬ್ನ್ನ ಆರ್ಡರ್ ಮಾಡಿದ್ದಾರೆ. ಅದನ್ನ ಅಡುಗೆ ಮನೆಯಲ್ಲಿ ಗೋಪ್ಚೆ ಸ್ಟೈಲ್ನಲ್ಲಿ ಅಡುಗೆ ಭಟ್ಟರು ತಯಾರಿಸುತ್ತಿದ್ದರು. ಅದೇ ಮಾಂಸದ ತುಂಡುಗಳ ರಾಶಿಯಿಂದ ದೊಡ್ಡ ಮಾಂಸದ ತುಂಡೊಂದು ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ. ಆದರೂ ಅದನ್ನ ಗಮನಿಸದೇ ಉಳಿದವರು ತಮ್ಮ ತಮ್ಮ ಕೆಲಸವನ್ನ ಮಾಡುತ್ತಿರುತ್ತಾರೆ. ಕೊನೆಗೆ ಒಬ್ಬ ಅಳಿದುಳಿದ ಮಾಂಸದ ತುಂಡನ್ನ ಹಾಕಿ ಕಬಾಬ್ನ್ನ ಮಾಡಿಕೊಡುತ್ತಾರೆ. ಅಡುಗೆ ಭಟ್ಟರೆ ಈ ನಿರ್ಲಕ್ಷ್ಯತನ @zabed99 ಅವರು ಮೊಬೈಲ್ನಲ್ಲಿ ರಿಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೋ ಈಗಾಗಲೇ ವೈರಲ್ ಆಗಿದ್ದು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 2 ಸಾವಿರ ಜನರು ಲೈಕ್ ಕೂಡಾ ಮಾಡಿದ್ದಾರೆ. ದುಬಾರಿ ಹೊಟೇಲ್ನಲ್ಲಿ ಇಂತಹ ನಿರ್ಲಕ್ಷ್ಯ ಅಂತ ಕೆಲವರು ಬೇಸರ ಮಾಡಿಕೊಂಡಿದ್ದಾರೆ. ಈ ವೀಡಿಯೋ ವೀಕ್ಷಿಸಿದ ಇನ್ನೊಬ್ಬರು ಬಿದ್ದಿರೋ ಮಾಂಸದ ತುಂಡಿನ ಬಿಲ್ನ್ನ ಕೂಡಾ ನಾವೇ ಕೊಡಬೇಕು ಅಂತ ತಮಾಷೆ ಮಾಡಿದ್ದಾರೆ. ಹೆಸರಿಗೆ ದುಬಾರಿ ಹೊಟೇಲ್ ಆದರೆ ಇಲ್ಲಿನ ವ್ಯವಸ್ಥೆ ಸಾಮಾನ್ಯ ಹೋಟೆಲ್ಗಿಂತಲೂ ಕೀಳಾಗಿದೆ ಅಂತ ಇನ್ನೊಬ್ಬರು ಈ ವಿಡಿಯೋ ನೋಡಿ ತಮ್ಮ ಆಕ್ರೋಶವನ್ನ ಹೊರಗೆ ಹಾಕಿದ್ದಾರೆ. https://youtu.be/l0rDyo9KK_s