ನವದೆಹಲಿ: ತೆರಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿರುವ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ ಇಂದು ಮತ್ತು ನಾಳೆ ಚಂಡಿಗಢದಲ್ಲಿ ನಡೆಯಲಿದೆ. ಕೆಲವು ವಸ್ತುಗಳ ಜಿಎಸ್ಟಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕೆಲವು ವಸ್ತುಗಳ ತೆರಿಗೆ ಏರಿಕೆ ಮತ್ತು ತೆರಿಗೆ ಸ್ಲ್ಯಾಬ್ ಗಳ ವಿಲೀನ ಕುರಿತಾಗಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಕೆಲವು ವಸ್ತುಗಳ ತೆರಿಗೆ ಕಡಿಮೆಯಾಗಲಿದ್ದು, ವಾಟರ್ ಪಂಪ್, ಚರ್ಮದ ವಸ್ತು, ಎಲ್ಇಡಿ ಬಲ್ಬ್ ದುಬಾರಿಯಾಗುವ ಸಾಧ್ಯತೆ ಇದೆ.
ಸೇವೆ ಮತ್ತು ಸಾಮಗ್ರಿಗಳ ಮೇಲಿನ ತೆರಿಗೆ ತೆರಿಗೆ ಸಂಬಂಧಿ ನಿಯಮಗಳ ಸರಳಿಕರಣ ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಜಿಎಸ್ಟಿಯಲ್ಲಿ ಪ್ರಸ್ತುತ ಶೇಕಡಾ 5, ಶೇಕಡ 12, ಶೇ. 18 ಹಾಗೂ ಶೇಕಡ 28ರ ಸ್ಲ್ಯಾಬ್ ಗಳಿದ್ದು, ಚಿನ್ನ ಮತ್ತು ಬೆಲೆಬಾಳುವ ಹರಳುಗಳಿಗೆ ಪ್ರತ್ಯೇಕವಾದ ಸ್ಲ್ಯಾಬ್ ಇದೆ. ಇದರೊಂದಿಗೆ ಶೇ. 28 ರವರೆಗೆ ಹೆಚ್ಚುವರಿ ಸುಂಕ ವಿಧಿಸುವ ಅವಕಾಶವಿದ್ದು ಈ ಪದ್ಧತಿಯಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.