ಅತಿ ಕಡಿಮೆ ಸಮಯದಲ್ಲಿ ಮುಖದ ಮೇಲಿರುವ ಮೊಡವೆಯನ್ನು ನಿವಾರಿಸಲು ಒಂದಷ್ಟು ಉಪಾಯಗಳಿವೆ. ಅದರ ಬಗ್ಗೆ ತಿಳಿಯೋಣ ಬನ್ನಿ.
ಕೆಲವೊಮ್ಮೆ ಮೊಡವೆಗಳು ಅನುವಂಶಿಕವಾಗಿ ಬಂದಿದ್ದರೆ ಮತ್ತೆ ಕೆಲವು ಬಾರಿ ಸ್ವಚ್ಛತೆಯ ಕೊರತೆಯಿಂದ ಕಾಣಿಸಿಕೊಳ್ಳುತ್ತದೆ. ಮಹಿಳೆಯರ ರಜಾ ದಿನಗಳ ಹಿಂದು ಮುಂದಿನಲ್ಲಿ ಮುಖದ ಮೇಲೆ ಮೊಡವೆಗಳು ಕಾಣಿಸುವುದು ಸಾಮಾನ್ಯ. ಇವುಗಳ ಗಾತ್ರವನ್ನು ಕಡಿಮೆ ಮಾಡುವ ಕೆಲವು ಟಿಪ್ಸ್ ಗಳಿವೆ.
ನಿಂಬೆರಸಕ್ಕೆ ಜೇನುತುಪ್ಪ ಬೆರೆಸಿ ಮೊಡವೆ ಆಗಿರುವ ಜಾಗಕ್ಕೆ ಹತ್ತು ನಿಮಿಷಕ್ಕೊಮ್ಮೆ ಹಚ್ಚುತ್ತಿದ್ದರೆ ಒಂದೆರಡು ಗಂಟೆಗಳಲ್ಲಿ ಮೊಡವೆಯ ಗಾತ್ರ ಕಡಿಮೆಯಾಗುತ್ತದೆ. ತಕ್ಷಣಕ್ಕೆ ಮೊಡವೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲದಿದ್ದರೂ ಅದರ ಗಾತ್ರವನ್ನು ತುಸು ಸಣ್ಣದಾಗಿಸಿ ಮೇಕಪ್ ಮಧ್ಯೆ ಮರೆ ಮಾಚುವಂತೆ ಮಾಡಬಹುದು.
ಪೇಸ್ಟ್ ಅನ್ನು ಮೊಡವೆ ಮೂಡಿರುವ ಜಾಗಕ್ಕೆ ಹಚ್ಚಿಕೊಂಡರೆ ಅದು ದೊಡ್ಡದಾಗಿ ಉಪಟಳ ಕೊಡುವುದಿಲ್ಲ. ಸಣ್ಣ ಗಾತ್ರದಲ್ಲೇ ಬಂದು ಹೋಗುತ್ತದೆ. ರಾತ್ರಿ ಹಚ್ಚಿ ಬೆಳಗ್ಗೆ ತೊಳೆದರೆ ಮುಖವೂ ಸ್ವಚ್ಛವಾಗಿರುತ್ತದೆ.
ಒಗ್ಗರಣೆಗೆ ಬಳಸುವ ಕರಿಬೇವಿನ ಎಲೆಯ ಪೇಸ್ಟ್ ಗೆ ಅರಶಿನ ಬೆರೆಸಿ ಹಚ್ಚಿದರೂ ಮೊಡವೆ ದೂರವಾಗುತ್ತದೆ. ಹಾಗೂ ಮುಖದ ಕಾಂತಿ ಇಮ್ಮಡಿಯಾಗುತ್ತದೆ.